ಈವತ್ತು 27 ಮೇ 2020, ಬುಧವಾರ. ಐದು ವರ್ಷಗಳ ನಂತರ ಬ್ಲಾಗ್ ಬರೆಯುತ್ತಿದ್ದೇನೆ. ಕಾರಣ, ಈ ವರ್ಷದಲ್ಲೊಂದು ವಿಶೇಷವಿದೆ. ಅದಕ್ಕೆ ಕಾರಣ ಕೊರೊನ ಎಂಬ virus. 😨 .ವಿಶ್ವದೆಲ್ಲೆಡೆ ಸುದ್ದಿ ಮಾಡುತ್ತಿರುವ ಕೊರೊನ ನನ್ನ blogspot ನಲ್ಲಿ ಸದ್ದು ಮಾಡದಿದ್ದರೆ ಹೇಗೆ!? ☺️☺️. ನನ್ನ ಕನ್ನಡ ವೀಕ್ ಆಗಿರುವುದು ಅನುಭವಕ್ಕೆ ಬರುತ್ತಿದೆ. ಹಾಗಾಗಿ ಇಂಗ್ಲಿಷ್ ಮಿಶ್ರಿತ ಕನ್ನಡ ಅಂದ್ರೆ ಕಂಗ್ಲೀಷ್ ಭಾಷೆಯಲ್ಲಿ ಬರೆಯುತ್ತಿದ್ದೇನೆ. ಕಳೆದ ಮೂರು ತಿಂಗಳಿಂದ ಕಳೆಯುತ್ತಿರುವ ಸಮಯ, ಬಹಳ ಭಿನ್ನವಾಗಿದೆ. ಇಡೀ ಪ್ರಪಂಚವೇ ಬೀಗ ಜಡಿದು ಮನೆಯಲ್ಲಿ ಕುಳಿತಿದ್ದು ಇದೆ ಮೊದಲು ಇರಬೇಕು. ನನ್ನ ಅಪ್ಪನ ಕಾಲದಲ್ಲಿಯೂ ಈ ರೀತಿಯಾಗಿರಲಿಲ್ಲವಂತೆ. ಹಾಗಾಗಿ ಈ ಸಂದರ್ಭವನ್ನು, ಈ ಕಾಲವನ್ನು record ಮಾಡಬೇಕು ಎನ್ನುವುದೇ ನನ್ನ ಉದ್ದೇಶ. ವರ್ಷದ ಆರಂಭದಲ್ಲಿ ಎಲ್ಲವೂ ಮಾಮೂಲಿಯಂತೆ ಇತ್ತು. ಮಗ ಕರಣ್ 10th ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ನಾವು ಗಂಡ ಹೆಂಡತಿ ಬೇಸಿಗೆ ರಜೆಯಲ್ಲಿ ಲೇಹ್ ಮತ್ತು ಲಧಾಕ್ ಟೂರ್ ಪ್ಲಾನ್ ಮಾಡೋದ್ರಲ್ಲಿ busy. ಮಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಬಹುಶಃ ಫೆಬ್ರುವರಿ ಯಲ್ಲಿ ಇರ್ಬೇಕು, ಚೀನಾದಲ್ಲಿ ಹೊಸ virus ಬಂದಿದೆಯಂತೆ ಎಂದು ಮೊದಲ ಬಾರಿ ಕೇಳಿದ್ದು. ನಂತರದ ದಿನಗಳಲ್ಲಿ ಚೀನಾದಲ್ಲಿ ಆಗುತ್ತಿರುವ ಹಾಗೂ ಉತ್ಪ್ರೇಕ್ಷೆ...
ನಾನು ಪರಮಸುಖಿ ಆದರೆ ಸಂತೋಷದಿಂದ ಅಳೆಯದಿರಿ ನಾನು ಸಿರಿವಂತೆ ಆದರೆ ಸ್ಥಾನದಿಂದ ಅಳೆಯದಿರಿ ನಾನು ಬಲ್ಲವಳು ಆದರೆ ಸಾಧನೆಯಿಂದ ಅಳೆಯದಿರಿ ನಾನು ದಿಟ್ಟೆ ಆದರೆ ಧೈರ್ಯದಿಂದ ಅಳೆಯದಿರಿ ನಾನು ಗುಣವಂತೆ ಆದರೆ ಅಂತಃಶಕ್ತಿಯಿಂದ ಎಂದೆಂದೂ ಅಳೆಯದಿರಿ
Comments
Post a Comment