ಸಂಕ್ರಮಣ

ಈವತ್ತು 27 ಮೇ 2020, ಬುಧವಾರ.
        ಐದು ವರ್ಷಗಳ ನಂತರ ಬ್ಲಾಗ್ ಬರೆಯುತ್ತಿದ್ದೇನೆ. ಕಾರಣ, ಈ ವರ್ಷದಲ್ಲೊಂದು ವಿಶೇಷವಿದೆ. ಅದಕ್ಕೆ ಕಾರಣ  ಕೊರೊನ ಎಂಬ virus. 😨 .ವಿಶ್ವದೆಲ್ಲೆಡೆ ಸುದ್ದಿ ಮಾಡುತ್ತಿರುವ ಕೊರೊನ ನನ್ನ blogspot ನಲ್ಲಿ ಸದ್ದು ಮಾಡದಿದ್ದರೆ ಹೇಗೆ!? ☺️☺️.  ನನ್ನ ಕನ್ನಡ ವೀಕ್ ಆಗಿರುವುದು ಅನುಭವಕ್ಕೆ ಬರುತ್ತಿದೆ. ಹಾಗಾಗಿ ಇಂಗ್ಲಿಷ್ ಮಿಶ್ರಿತ ಕನ್ನಡ ಅಂದ್ರೆ ಕಂಗ್ಲೀಷ್ ಭಾಷೆಯಲ್ಲಿ ಬರೆಯುತ್ತಿದ್ದೇನೆ.
  ಕಳೆದ ಮೂರು ತಿಂಗಳಿಂದ ಕಳೆಯುತ್ತಿರುವ ಸಮಯ, ಬಹಳ ಭಿನ್ನವಾಗಿದೆ. ಇಡೀ ಪ್ರಪಂಚವೇ ಬೀಗ ಜಡಿದು ಮನೆಯಲ್ಲಿ ಕುಳಿತಿದ್ದು ಇದೆ ಮೊದಲು ಇರಬೇಕು. ನನ್ನ ಅಪ್ಪನ ಕಾಲದಲ್ಲಿಯೂ ಈ ರೀತಿಯಾಗಿರಲಿಲ್ಲವಂತೆ. ಹಾಗಾಗಿ ಈ ಸಂದರ್ಭವನ್ನು, ಈ ಕಾಲವನ್ನು record ಮಾಡಬೇಕು ಎನ್ನುವುದೇ ನನ್ನ ಉದ್ದೇಶ.
       ವರ್ಷದ ಆರಂಭದಲ್ಲಿ ಎಲ್ಲವೂ ಮಾಮೂಲಿಯಂತೆ ಇತ್ತು. ಮಗ ಕರಣ್ 10th ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ನಾವು ಗಂಡ ಹೆಂಡತಿ ಬೇಸಿಗೆ ರಜೆಯಲ್ಲಿ ಲೇಹ್ ಮತ್ತು ಲಧಾಕ್ ಟೂರ್ ಪ್ಲಾನ್ ಮಾಡೋದ್ರಲ್ಲಿ busy. ಮಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಬಹುಶಃ ಫೆಬ್ರುವರಿ ಯಲ್ಲಿ ಇರ್ಬೇಕು,  ಚೀನಾದಲ್ಲಿ ಹೊಸ virus ಬಂದಿದೆಯಂತೆ ಎಂದು ಮೊದಲ ಬಾರಿ ಕೇಳಿದ್ದು.  ನಂತರದ ದಿನಗಳಲ್ಲಿ ಚೀನಾದಲ್ಲಿ ಆಗುತ್ತಿರುವ ಹಾಗೂ ಉತ್ಪ್ರೇಕ್ಷೆ ಎನಿಸುವ ವಿಡಿಯೋಗಳು ಮೊಬೈಲ್ ಗೆ ಬಂದು ಬೀಳಲಾರಂಭಿಸಿದವು. ಎಲ್ಲೆಂದರಲ್ಲಿ ಜನರು ಕುಸಿದು ಬಿದ್ದು ಸಾವನ್ನಪ್ಪುವ ವಿಡಿಯೋ ವನ್ನು ನಂಬುವುದೇ ಬಿಡುವುದೇ ಎಂದು ಅರ್ಥವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಮೆಲ್ಲಗೆ ಹೊಸ virus ತುಂಬಾ ಅಪಾಯಕಾರಿ ಎನ್ನುವುದು ಮನಸ್ಸಿಗೆ ಬರಲಾರಂಭಿಸಿತು. ಎಷ್ಟೇ ಆದರೂ ಅದು ಚೀನಾದಲ್ಲಿ ಇರುವುದು , ಕೈಗೆ ಸಿಕ್ಕ ಪ್ರಾಣಿಗಳನ್ನೆಲ್ಲ ತಿನ್ನುವುದಕ್ಕೆ ದೇವರೇ ತಕ್ಕ ಶಾಸ್ತಿ ಮಾಡಿದ ಎಂದೆಲ್ಲಾ ಮಾತಾಡಿಕೊಂಡೆವು. ಸಂಬಂಧಿಗಳಲ್ಲಿ ಮಾತಾಡುವುದಕ್ಕೆ ಇದೆ ಹೊಸ topic ಆಗಿತ್ತು. ಸತ್ಯವಾಗಿಯೂ  mid ಮಾರ್ಚ್ ತನಕವೂ ಅದು ನಮ್ಮ ಕಾಲ ಬುಡಕ್ಕೆ ಬರಲಿದೆ ಎಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.
         ದಿನಗಳು ಎಂದಿನಂತೆಯೇ ನಡೆಯುತ್ತಿದ್ದವು. ಫೆಬ್ರುವರಿ 26 ರಿಂದಲೇ ಮಗನ ಪರೀಕ್ಷೆಗಳು ಆರಂಭವಾಗಿದ್ದು. ಮಾರ್ಚ್ 18ರ ವರೆಗೂ ಇತ್ತು. ಅವನ ಇನ್ನೊಂದೆರಡು ಪರೀಕ್ಷೆಗಳು ಬಾಕಿ ಇದ್ದಾಗ, ಎಲ್ಲೆಡೆಯೂ ಕೊರೊನ ವೈರಸ್ ಎಂಬ ಶಬ್ದ ಕೇಳಿ ಬರತೊಡಗಿತು. ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಕುತೂಹಲದಿಂದ, ಗೂಗಲ್ ನಲ್ಲಿ , you tube ನಲ್ಲಿ ನಾನು ಹಾಗೂ ನನ್ನ ಮಗ ಈ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಆರಂಭಿಸಿದೇವು. ಮಾಹಿತಿಗಳೆಲ್ಲವು ಆಂತಕವನ್ನುಂಟು ಮಾಡುವವೇ ಆಗಿದ್ದವು. ಈಗ ಹುಟ್ಟಿಕೊಂಡಿರುವ ವೈರಸ್ ಕೊರೊನ ವೈರಸ್ family ಯದ್ದಂತೆ. ಒಬ್ಬರಿಂದ ಇನ್ನೊಬ್ಬರಿಗೆ ಸಾಂಕ್ರಾಮಿಕವಾಗಿ ಹರಡುವುದಂತೆ. ಸಾರ್ಸ್ virus ನ ರೂಪಾಂತರವಂತೆ. ಅದಕ್ಕೆ ಕಿರೀಟದಂತಹ structure ಇರುವುದರಿಂದ ಕೊರೊನ ಎಂಬ ಹೆಸರು. ಮಾನವನ ದೇಹ ಹೊಕ್ಕ virus, ನೇರವಾಗಿ ಶ್ವಾಸಕೋಶ ಕ್ಕೆ ಲಗ್ಗೆ ಇಟ್ಟು, ತನ್ನ ಕಿರೀಟದಂತಹ structure ನ ಸಹಾಯದಿಂದ ಶ್ವಾಸಕೋಶದಲ್ಲಿ ಅಂಟಿಕೊಂಡು ಅಲ್ಲಿನ ಜೀವಕೋಶಗಳನ್ನು ಕೊಲ್ಲುತ್ತ ಬರುತ್ತದಂತೆ. ಆ ಸತ್ತ ಜೀವಕೋಶಗಳು ಶ್ವಾಸಕೋಶದಲ್ಲಿ ತುಂಬಿ ಕಫದಲ್ಲಿ ಮಾರ್ಪಾಟಾಗುತ್ತದಂತೆ. ಈ ಹಂತದಲ್ಲಿ ರೋಗಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆಯಂತೆ. ಸರಿಯಾದ ವೇಳೆಗೆ ಚಿಕಿತ್ಸೆ ಸಿಗದಿದ್ದರೆ ರೋಗಿಯ ಸಾವು ನಿಶ್ಚಿತವಂತೆ!!😢😢 , ಒಂದು ವೇಳೆ ರೋಗಿ ಗುಣಮುಖನಾದರು, ಶ್ವಾಸಕೋಶದ ಸಮಸ್ಯೆ ಜೀವನಪರ್ಯಂತ ಉಳಿದು ಬಿಡುವುದಂತೆ!! ಹೀಗೆ ಸಿಕ್ಕಿತ್ತು  ಅಂತೆ ಕಂತೆಗಳ ಮಾಹಿತಿ. ಹೊಸ ವೈರಸ್ ತುಂಬಾ ಡೆಡ್ಲಿ  ಅನ್ನುವುದಕ್ಕೆ ಸಾಕ್ಷಿಯಾಗಿ ಇಟಲಿಯಲ್ಲಿ ಸಾವಿನ ಸರಮಾಲೆ.
          ಎಲ್ಲೆಲ್ಲೂ ಅದೇ ಮಾತು, ಅದೇ ಚರ್ಚೆ. ನಾನು ಮಗನ ಪರೀಕ್ಷೆಗೆ ಏನೂ ತೊಂದರೆಯಾಗಬಾರದೆಂದು ದಿನವೂ ದೇವರಲ್ಲಿ ಬೇಡುತ್ತಿದ್ದೆ. ಮಾರ್ಚ್ 18 ಕ್ಕೆ ಪರೀಕ್ಷೆ ಮುಕ್ತಾಯವಾಯಿತು. ಆಗಲೇ ಭಾರತದಲ್ಲಿ virus ಹರಡಲು ಆರಂಭವಾಗಿತ್ತು. ವಿದೇಶದಿಂದ ಬರುತ್ತಿದ್ದವರೇ ವೈರಸ್ ಅನ್ನು ಹೊತ್ತು ತರುತ್ತಿದ್ದರು.
          ಅದೇ ವೇಳೆಗೆ ಮಗಳಿಗೆ ಶುರುವಾದ viral fever ಹಾಗೂ ಅದರೊಟ್ಟಿಗೆ ಪ್ರಾರಂಭವಾದ ಎಡೆಬಿಡದ ಕೆಮ್ಮು ನನ್ನ ನಿದ್ರೆ ಕಸಿಯಿತು. ಎರಡು ದಿನಗಳಿಗೊಮ್ಮೆ ವೈದ್ಯರಲ್ಲಿ ಹೋಗಿ ಬರುತ್ತಿದ್ದೆ. ಮಾರ್ಚ್ ಮೊದಲ ವಾರದಲ್ಲಿ ಆರಂಭವಾದ ಕೆಮ್ಮು ಕನಿಷ್ಠ ಪಕ್ಷ 15 ದಿನಗಳವರೆಗೆ ಇದ್ದಿತ್ತು. ಕೇಳಿಬರುತ್ತಿದ್ದ ಸುದ್ದಿಗಳಿಗೂ ಮಗಳ ಕೆಮ್ಮಿಗೂ ಮನಸ್ಸು link ಮಾಡುತ್ತಿತ್ತು. ಅವಳಿಂದ ನನಗೆ , ಹಾಗೂ ಮಗನಿಗೂ ಹರಡಿತು. ನಾವಿಬ್ಬರು ಬೇಗ ಚೇತರಿಸಿಕೊಂಡೆವು. ಈಗಲೂ ನನಗೆ ಅನ್ನಿಸುವುದು ಅದು ಕೊರೊನವೇ ಇದ್ದಿರಬೇಕೆಂದು. 😁😁
      ಮಾರ್ಚ್ 21 ಕ್ಕೆ ಕೊರೊನ ನಿಯಂತ್ರಣ ಮಾಡಲು ಮೋದಿಯವರು ಇಡೀ ದೇಶಕ್ಕೆ lockdown ಘೋಷಿಸಿದರು. ಅದೂ ಬರೋಬ್ಬರಿ 21 ದಿನಗಳವರೆಗೆ. ಇಡೀ ಜನತೆಗೆ ಅಚ್ಚರಿಯ ದಿನವದು. History ನಲ್ಲೇ ಇಲ್ಲದ ಈ ರೀತಿಯ ಬೆಳವಣಿಗೆಗೆ  ನಾನಂತೂ ಗರಬಡಿದವಳಂತಾದೆ. ಎಲ್ಲವೂ ಸ್ಥಬ್ಧ. ಎಲ್ಲವೂ ಹಾಲ್ಟ್.             ಮೊದಲನೇ lockdown ತುಂಬಾ ಭಿನ್ನ ವಾದ ಅನುಭವ. ಹೆದ್ದಾರಿಯ ವಾಹನಗಳ ಶಬ್ದಗಳನ್ನೇ ಕೇಳುತ್ತ ದಿನ ಕಳೆಯುತ್ತಿದ್ದವಳಿಗೆ, ಮೊದಲ ಬಾರಿಗೆ ಹಕ್ಕಿಗಳ ಚಿಲಿಪಿಲಿ ಸ್ಪಷ್ಟವಾಗಿ ಕೇಳತೊಡಗಿತು. ನೆರೆಹೊರೆಯವರ ಮಾತುಗಳು ಕೇಳಿ ಬರತೊಡಗಿದವು. ಪಕ್ಕದ ಮನೆಯ ಮಕ್ಕಳು ಅಮ್ಮಾ ಎಂದರೆ ನಾನು ಓಗೋಡುತ್ತಿದ್ದೆ!! 😀 ಎಲ್ಲವೂ ಸ್ಥಬ್ಧ ವಾಗಿದ್ದರೂ ಅಕ್ಕಪಕ್ಕದ ಮನೆಯಿಂದ ಬರುತ್ತಿದ್ದ ಪಾತ್ರೆ ಪಗಡಗಳ ಶಬ್ದ, ಕುಕ್ಕರಿನ ವಿಷಲ್ನ ಶಬ್ದ, ಮಗು ಅಳುವ ಶಬ್ದಗಳು ಏನೇ ನಿಂತರೂ ಮನುಷ್ಯನ ಬದುಕು ಮಾತ್ರ ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದವು. ಹೆದ್ದಾರಿಯು ಮನೆಯ ಅಂಗಳದಂತೆ ಶಾಂತವಾಗಿತ್ತು. ಬೀದಿ ನಾಯಿಗಳು ಕಕ್ಕಾ ಬಿಕ್ಕಿಯಾಗಿ ಅಲೆದಾಡುತ್ತಿದ್ದವು. ಹೆದ್ದಾರಿಯ ಬದಿಯಲ್ಲಿ ನಿಂತು ನೋಡಿದರೆ ಕಣ್ಣಳತೆಗೆ ಕಾಣುವ ಮನೆಗಳಲ್ಲಿ ನಿಜವಾಗಿಯೂ ಮನುಶ್ಯರಿರುವರೇ ಎಂಬ ಅನುಮಾನ ಮೂಡುತ್ತಿತ್ತು. ಮಕ್ಕಳ statue ಆಟ ನೆನಪಾಗುತ್ತಿತ್ತು. ಜನರು ಎಲ್ಲೆಲ್ಲಿ ಇದ್ದರೋ ಅಲ್ಲೇ ಬಂಧಿಯಾಗಿದ್ದರು. ದಾರಿಗಳು ಪ್ರಾಣಿಗಳ ಮಾರ್ಗವಾಯಿತು. ಕಾಡುಪ್ರಾಣಿಗಳು ನಾಡು ನೋಡಲು ಸಫಾರಿ ಬಂದಿದ್ದವು. 😄😄 ಗಾಳಿ, ನೀರು ಭೂಮಿ ಎಲ್ಲವೂ ಮನುಷ್ಯನ intervention ಇಲ್ಲದೆ ಸ್ವಚ್ಛವಾದವು.  ಮಾನವನ ಚಟುವಟಿಕೆಗಳು ನಿಂತರೆ ನಿಸರ್ಗದಲ್ಲಿ ಏನೆಲ್ಲ ಬಡಲಾವಣೆಗಳಾಗುವುವು ಎಂಬುದು ಮೊದಲ ಬಾರಿಗೆ ಅನುಭವಕ್ಕೆ ಬಂದಿತು.
       ಜನರ ಎಲ್ಲ ವ್ಯವಹಾರಗಳಿಗೆ ಬ್ರೇಕ್ ಬಿದ್ದಿತು. ಎಲ್ಲರಿಗೂ ಕುಟುಂಬದ ಜೊತೆ ಕಾಲ ಕಳೆಯುವ ಅವಕಾಶ ಕಲ್ಪಿಸಿಕೊಟ್ಟಿತ್ತು ಕೊರೊನ ವೈರಸ್. ಮನೆಯಲ್ಲಿ ತಾಜಾ ಆಹಾರ ಸೇವಿಸಿ ಯಾರಿಗೂ ಅನಾರೋಗ್ಯವಿಲ್ಲ. ಹಲವರು ತಮ್ಮ ಹವ್ಯಾಸದತ್ತ ಮುಖ ಮಾಡಿದರು. ಜೀವನ disturb ಆಗಿ depression ಗೆ ಒಳಗಾದವರೂ ಇದ್ದಾರೆ. 21 ದಿನ ಕಳೆಯುವಷ್ಟರಲ್ಲಿ ಎಲ್ಲರೂ home addict ಆಗಿಬಿಟ್ಟಿದ್ದರು!! 😄😄 ಅಂತೂ ಮರೆಯಾಲಗದಂತ ಅನುಭವ.
        Lockdown 1.0, 2.0,3.0 ಕೊಡ ಕಳೆದು ಈಗ 4.0 ನಡೆಯುತ್ತಿದೆ. ವೈರಸ್ ಅಂತೂ ನಿಯಂತ್ರಣಕ್ಕೆ ಬರಲಿಲ್ಲ. ಇಂದಿಗೆ ಭಾರತದಲ್ಲಿ 1,51,767 ರಷ್ಟು ಜನರಿಗೆ ಕೊರೊನ ತಗುಲಿದೆ. ಸತ್ತವರ ಸಂಖ್ಯೆ 4337. ಮಹಾರಾಷ್ಟ್ರ ಭಾರತದ newyork ಆಗಿದೆ.  ಆ ಒಂದು ರಾಜ್ಯದಲ್ಲೆ 57000 ಸೋಂಕಿತರು. ಎಲ್ಲ ಆಸ್ಪತ್ರೆಗಳೂ ಭರ್ತಿಯಾಗಿವೆ. ಮುಂದಕ್ಕೆ ಹೇಗೋ ದೇವನೆ ಬಲ್ಲ.
      ಆದರೂ ಬೇರೇ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ recovery rate ಉತ್ತಮವಾಗಿದೆ ಎನ್ನುತ್ತಾರೆ.  Death rate 2.13 ಅಂತೆ. ಇಂದಿನ ಲೆಕ್ಕದಲ್ಲಿ 64,426 ಮಂದಿ ಗುಣಮುಖರಾಗಿದ್ದರೆ. ನಮ್ಮ ದೇಶದ recovery 42% ಎಂದು ಚಾನೆಲ್ನವರು ಹೇಳುತ್ತಾರೆ. ಅವರದು ಯಾವ ರೀತಿ ಲೆಕ್ಕಾಚಾರ ಗೊತ್ತಿಲ್ಲ.
    ನನ್ನ ಪ್ರಕಾರ ಒಬ್ಬ ಕೊರೊನ ರೋಗಿಗೆ ಎರಡು possibilities ಇರುತ್ತದೆ. ಒಂದು ಗುಣಮುಖನಾಗುವುದು. ಮತ್ತೊಂದು ಸಾವು. ಹಾಗಾಗಿ active cases ಗಳನ್ನು ನಾವು ಈಗಲೇ ಲೆಕ್ಕದಲ್ಲಿ ಹಿಡಿಯಲಾಗದು. ಏಕೆಂದರೆ ಅವುಗಳ ಫಲಿತಾಂಶ ಇನ್ನಷ್ಟೇ ಗೊತ್ತಾಗಬೇಕು. ಹಾಗಾಗಿ recovery rate ಕಂಡು ಹಿಡಿಯಬೇಕಾದರೆ , ಒಟ್ಟು ಫಲಿತಾಂಶ ಬಂದ cases ಗಳನ್ನಷ್ಟೇ ತೆಗೆದುಕೊಳ್ಳಬೇಕು. ಅಂದರೆ,
Total recovered cases +total deaths =closed cases
64426+4337= 68,763
ಈಗ death rate = 4337*100/ 68763
                           = 6.3%
Recovery rate = 93.7%

ಅಂದರೆ ನೂರು ರೋಗಿಗಳಲ್ಲಿ 93 ಜನ ಗುಣಮುಖರಾಗುತ್ತಾರೆ ಹಾಗೂ 6 ರಿಂದ 7 ಜನ ಸಾವನ್ನಪ್ಪುತ್ತಾರೆ. ಈಗ ಹೇಳಿ ನಿಜವಾಗಿಯೂ ಭಯ ಪಡುವ ಸಂದರ್ಭವಿದೆಯೇ? 😊😊. ಕಳೆದ ಏಪ್ರಿಲ್ ಗೆ ಹೋಲಿಸಿದರೆ ರೋಗಿಗಳಲ್ಲಿ ರೋಗದ ಗುಣಲಕ್ಷಣಗಳೂ ಕಡಿಮೆಯಾಗಿವೆ. ಅಂದರೆ ವೈರಸ್ harmless ಆಗುತ್ತಿದೆಯೇ? ಅಥವಾ herd immunity ಬರುತ್ತಿರುವ ಸಂಕೇತವೇ?🤔🤔  
ಈಗ ಏನೋ ಭಾರತದಲ್ಲಿ ಕೊರೊನ ರೋಗಿಗಳ treatment ನ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ರೋಗಿಗಳು ಅವರ ಖರ್ಚು ಅವರೇ ಭರಿಸಬೇಕಾಗಬಹುದು ಹಾಗೂ ಮನೆಯಲ್ಲೇ ಚಿಕಿತ್ಸೆ ಪಡೆಯಬೇಕಾಗಿ ಬರಬಹುದು.
          ನನ್ನ ಪ್ರಕಾರ ಒಮ್ಮೆ ಹುಟ್ಟಿದ ವೈರಸ್ ಅನ್ನು ನಿರ್ಮೂಲನೆ ಮಾಡಲು ಬಹಳಷ್ಟು ಸಮಯ ಬೇಕು. ಹಾಗಾಗಿ ವೈರಸ್ ಹರಡುವುದನ್ನು ತಪ್ಪಿಸಲು ಬಹಳ ಕಷ್ಟವಿದೆ. ಬಹುಶಃ ಎಲ್ಲರಿಗೂ ಬಂದು ಹೋಗುವಂಥದ್ದೇ. ಆದರೆ  ಮುಂಬರುವ ದಿನಗಳಲ್ಲಿ ಇದರ ಉಗ್ರತೆ ಕಡಿಮೆಯಾಗಬಹುದು ಹಾಗೂ ಇದು ಕೂಡ dengue, H1N1 ತರಹ local virus ಆಗಬಹುದು. ಪ್ರತೀ ವರ್ಷವೂ ಆಗಾಗ ಕಾಣಿಸಿಕೊಳ್ಳಬಹುದು. ಇದು ನನ್ನ ಊಹೆ. ಆದರೆ ತಜ್ಞರು ಮಳೆಗಾಲದಲ್ಲಿ ಕೊರೊನ ವೈರಸ್ ಉಗ್ರ ಸ್ವರೂಪ ತಾಳಲಿದೆ ಎಂದು ಅಭಿಪ್ರಾಯಪಡುತ್ತಾರೆ. ಇದನ್ನು ಕಾಲವೇ ನಿರ್ಧರಿಸಬೇಕು.
        ಹೊರಗಡೆ ಜನರ ಓಡಾಟ ಕಂಡರೆ ಮನೆಯಲ್ಲಿ ಕುಳಿತು ಎಷ್ಟು ಬೇಸತ್ತಿದ್ದಾರೆ, ತಮ್ಮ ನೋರ್ಮಲ್ ಬದುಕಿಗೆ ಮರಳಲು ಎಷ್ಟು ಕಾತರರಾಗಿದ್ದರೆ ಎಂಬುದು ಗೊತ್ತಾಗುತ್ತದೆ. ಬಹುಶಃ ಎಲ್ಲರೂ ಕೊರೊನ ವನ್ನು ಎದುರಿಸಲು ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದಾರೆ.    ಮುಖಕ್ಕೆ ಮಾಸ್ಕ್ ಹಾಕಿಕೊಂಡೆ ದಿನದ ವ್ಯವಹಾರ ಮುಂದುವರಿಸುತ್ತಿದ್ದಾರೆ.   ಸಾಮಾಜಿಕ ಅಂತರ ಕಾಪಡಿಕೊಂಡೇ ಭಾಂಧವ್ಯ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ.   ಜನರು ಭಾವನಾತ್ಮಕವಾಗಿಯೂ   ಬದಲಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ  ಏನೇನು ಕಾದಿದೆಯೋ ದೇವರಿಗೇ ಗೊತ್ತು. ಕೊರೊನ ವೈರಸ್ ಜಗತ್ತನ್ನು ಅಪ್ಪಿಕೊಂಡಿದೆ. ಅಂಫಾನ್ ಚಂಡಮಾರುತ ಬೀಸಿ ಹೋಗಿದೆ. ಇನ್ನು ಮಿಡತೆಗಳ ಹಾವಳಿ ಎದುರಿಸಲು ಭಾರತ ಸನ್ನದ್ಧ ವಾಗುತ್ತಿದೆ.
      ಇದು ಸಂಕ್ರಮಣ ಕಾಲ. ಬಹುಶಃ ಜಗತ್ತಿನಾಂದ್ಯಂತ ಜನರ ಜೀವನಶೈಲಿ ಬದಲಾಗುವ ಕಾಲ. ಎಲ್ಲ system ಗಳಲ್ಲಿಯೂ ಬದಲಾವಣೆ ನೋಡುವ ಕಾಲ.
ಈಗಿರುವುದು ಒಂದೇ ಮಂತ್ರ.
ಬಂದದ್ದೆಲ್ಲ ಬರಲಿ, ದೇವರ ದಯೆಯೊಂದಿರಲಿ. 🙏🙏

ರೋಹಿಣಿ ಹತ್ವಾರ್.
        

Comments

  1. ಅನುಭವ ದಟ್ಟ ವಾಗಿದೆ. ಇದು ಜೀವನ ದ ಅದ್ಬುತ ದಾಖಲೆ. ಬದಲಾವಣೆ ಕಾಲ ದಲ್ಲಿ ನಾವಿದ್ದೇವೆ ಅನಿಸುತ್ತದೆ

    ReplyDelete

Post a Comment

Popular posts from this blog

ಅಮ್ಮ

ಹಬ್ಬ ಹಬ್ಬ !!