ಪಮ್ಮಿಗೊಂದು ಪತ್ರ

ಹಾಯ್ ಪಮ್ಮಿ,
ನೋಡು, ಬ್ಲಾಗ್ನಲ್ಲಿ ನಿಂಗೆ ಪತ್ರ ಬರಿತ ಇದೀನಿ. ಕಾರ್ಡಿನಿಂದ ಶುರು ಆಗಿ ಈಗ ಬ್ಲಾಗಿಗೆ ಬಂದಿದೆ. ಅಷ್ಟರವರೆಗೂ ಉಳಿಸಿಕೊಂಡು ಬಂದಿದಿವಲ್ಲ ಸದ್ಯ . ಮೊನ್ನೆ ನಿನ್ನ ಮನೆಗೆ ಬಂದಾಗ ಯಾಕೋ ಮನಸ್ಸು ಸರಿ ಇರಲಿಲ್ಲ. ಗೊತ್ತಲ್ಲ ನಿಂಗೆ. ಆದ್ರೆ ನಿನ್ ಜೊತೆ ಮಲ್ಪೆ ಬೀಚಿಗೆ ಹೋಗಿ ಬಂದ್ಮೇಲೆ ಒಂದ್ ಸರ್ತಿ ಫ್ರೆಶ್ ಆಯ್ತು ನೋಡು. ಅದರಲ್ಲೂ ಗಾಡಿಯಲ್ಲಿ ಹೋಗಿದ್ದು ಮತ್ತು ಮಜಾ ಬಂತು. ಸದ್ಯ ನನ್ನನ್ನು ಸೇಫಾಗಿ ಕರ್ಕೊಂಡು ಬಂದ್ಯಲ್ಲ !! ಒಂದ್ ಮಾತಂತೂ ಹೇಳ್ಬೇಕು. ನಿಂದು ಭಾವಂದು ಜೋಡಿ "ಮೇಡ್ ಫಾರ್ ಈಚ್ ಅದರ್ " .ಎಷ್ಟು ಖುಷಿಯಾಯ್ತು ಗೊತ್ತ ನಂಗೆ ನಿಮ್ಮಿಬ್ರನ್ನು ನೋಡಿ. ಇಷ್ಟು ದಿನ ನಾನು ಸರಿಯಾಗಿ ಅಬ್ಸರ್ವ್ ಮಾಡಿರಲಿಲ್ಲ. ಸಂಬಂಧದಲೆಲ್ಲು ಕೃತಕತೆಯ ಲೇಪವಿಲ್ಲ, ಅತಿಯಾದ ನಿರೀಕ್ಷೆಗಳು ಇಲ್ಲ, ಅಹಂನ ದೊಂಬರಾಟವಿಲ್ಲ.. ಹಹ.. ನಂಗೊತ್ತು ನಿನೆಂತಿಯ ಅಂತ. ಇನ್ನು ಜಾಸ್ತಿ ಕೊರೆಯೋಲ್ಲ ಬಿಡು.... ಮೊದಲು ಬರೆಯುತಿದ್ದ ಹಾಗೆ ಬರೀಬೇಕು ಅಂದ್ರೆ, ಪವನ ಕೊಡಿಸಿದ ಚುಡಿ ಹೊಲೆಯೋಕೆ ಕೊಟ್ರು ಇನ್ನು ಸಿಕ್ಕಿಲ್ಲ, ನಮ್ಮ ಬೆಳಗಾಂ ಪ್ರೊಗ್ರಾಮ್ ಕ್ಯಾನ್ಸಲ್ ಆಯ್ತು, ೫ ನೆ ತಾರೀಕು ಕರಣ್ ನಿಗೆ ಶಾಲೆ ಶುರು, ಅತ್ತೆಗೆ ಕಾಲು ನೋವು ಜಾಸ್ತಿ ಆಗಿದೆ, ಮಾವನಿಗೆ ಬೆನ್ನು ನೋವು ಹೆಚ್ಚಾಗಿದೆ, ನಂಗೆ ಕೆಮ್ಮು ಸ್ವಲ್ಪ ಕಮ್ಮಿಯಾಗಿದೆ... ಒಳ್ಳೆ ಡಾಕ್ಟರ ಪ್ರಿಸ್ಸಿಪ್ಶನ್ ಇದ್ದ ಹಾಗೆ ಇದ್ಯಲ್ಲ !!
ಮತ್ತೆ ನಿಂದೆನಮ್ಮ ಸಮಾಚಾರ? ನೀನೇನು ಬ್ಲಾಗ್ ಲ್ಲಿ ಬರೆಯೋದು ಬೇಡ ಮಾಮೂಲಿ ಪತ್ರದಲ್ಲೇ ಬರಿ. ಏನೇ ಆಗಲೀ ನಂಗೆ ಮೂಡು ಹಾಳಾದಾಗಲೆಲ್ಲ ನೀನೋಬ್ಳುಇದ್ದೀಯಲ್ಲ ಕೌನ್ಸೆಲ್ಲಿಂಗ್ ಗೆ ಅಂತ, ಅದಕ್ಕೆ ಥ್ಯಾಂಕ್ಸ್ ಹೇಳಲೇಬೇಕು.
ಬೇರೆ ತುಂಬ ವಿಷಯಗಳಿವೆ. ಮತ್ತೆ ನೋಡೋಣ.
ಇಂತಿ ನಿನ್ನ ಗೆಳತಿ
ರೋಹಿಣಿ.

Comments

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!