Posts

ಸಂಕ್ರಮಣ

ಈವತ್ತು 27 ಮೇ 2020, ಬುಧವಾರ.         ಐದು ವರ್ಷಗಳ ನಂತರ ಬ್ಲಾಗ್ ಬರೆಯುತ್ತಿದ್ದೇನೆ. ಕಾರಣ, ಈ ವರ್ಷದಲ್ಲೊಂದು ವಿಶೇಷವಿದೆ. ಅದಕ್ಕೆ ಕಾರಣ  ಕೊರೊನ ಎಂಬ virus. 😨 .ವಿಶ್ವದೆಲ್ಲೆಡೆ ಸುದ್ದಿ ಮಾಡುತ್ತಿರುವ ಕೊರೊನ ನನ್ನ blogspot ನಲ್ಲಿ ಸದ್ದು ಮಾಡದಿದ್ದರೆ ಹೇಗೆ!? ☺️☺️.  ನನ್ನ ಕನ್ನಡ ವೀಕ್ ಆಗಿರುವುದು ಅನುಭವಕ್ಕೆ ಬರುತ್ತಿದೆ. ಹಾಗಾಗಿ ಇಂಗ್ಲಿಷ್ ಮಿಶ್ರಿತ ಕನ್ನಡ ಅಂದ್ರೆ ಕಂಗ್ಲೀಷ್ ಭಾಷೆಯಲ್ಲಿ ಬರೆಯುತ್ತಿದ್ದೇನೆ.   ಕಳೆದ ಮೂರು ತಿಂಗಳಿಂದ ಕಳೆಯುತ್ತಿರುವ ಸಮಯ, ಬಹಳ ಭಿನ್ನವಾಗಿದೆ. ಇಡೀ ಪ್ರಪಂಚವೇ ಬೀಗ ಜಡಿದು ಮನೆಯಲ್ಲಿ ಕುಳಿತಿದ್ದು ಇದೆ ಮೊದಲು ಇರಬೇಕು. ನನ್ನ ಅಪ್ಪನ ಕಾಲದಲ್ಲಿಯೂ ಈ ರೀತಿಯಾಗಿರಲಿಲ್ಲವಂತೆ. ಹಾಗಾಗಿ ಈ ಸಂದರ್ಭವನ್ನು, ಈ ಕಾಲವನ್ನು record ಮಾಡಬೇಕು ಎನ್ನುವುದೇ ನನ್ನ ಉದ್ದೇಶ.        ವರ್ಷದ ಆರಂಭದಲ್ಲಿ ಎಲ್ಲವೂ ಮಾಮೂಲಿಯಂತೆ ಇತ್ತು. ಮಗ ಕರಣ್ 10th ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ನಾವು ಗಂಡ ಹೆಂಡತಿ ಬೇಸಿಗೆ ರಜೆಯಲ್ಲಿ ಲೇಹ್ ಮತ್ತು ಲಧಾಕ್ ಟೂರ್ ಪ್ಲಾನ್ ಮಾಡೋದ್ರಲ್ಲಿ busy. ಮಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಬಹುಶಃ ಫೆಬ್ರುವರಿ ಯಲ್ಲಿ ಇರ್ಬೇಕು,  ಚೀನಾದಲ್ಲಿ ಹೊಸ virus ಬಂದಿದೆಯಂತೆ ಎಂದು ಮೊದಲ ಬಾರಿ ಕೇಳಿದ್ದು.  ನಂತರದ ದಿನಗಳಲ್ಲಿ ಚೀನಾದಲ್ಲಿ ಆಗುತ್ತಿರುವ ಹಾಗೂ ಉತ್ಪ್ರೇಕ್ಷೆ...

ನೀವ್ ಏನ್ ಹೇಳ್ತೀರಾ ?

      ಇತ್ತೀಚಿಗೆ ಹೊಸ ವ್ಯಕ್ತಿಯೋರ್ವರ ಪರಿಚಯವಾಯ್ತು.  ಅವರು ಮುಂಬಯಿಯವರು. ಇಲ್ಲಿ ಅಂದರೆ ಕುಂದಾಪುರಕ್ಕೆ ಬಂದು ಎರಡು ವರ್ಷಗಳು ಸಂದಿವೆ ಅಂತೆ. ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಮಿನಿ ಮುಂಬೈ ದರ್ಶನವಾಯ್ತು. ಮಕ್ಕಳು ಹಿಂದಿಯಲ್ಲಿಯೇ ಮಾತನಾಡುತ್ತಿದ್ದರು. ನನ್ನ ಸೊ ಕಾಲ್ಡ್ ಗೆ ಗೆಳತಿ ಮಕ್ಕಳೊಡನೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತಾಡುತ್ತಿದ್ದರು. ಕೆಲಸದ ಜನರು ಸಹಿತ ಹಿಂದಿಯೇ ಮಾತಾಡುತಿದ್ದರು! ನನಗೆ ಅಚ್ಚರಿಯಾಯಿತು. ನನಗೆ ತಿಳಿದ ಹಾಗೆ ಅವರು ಮೂಲತ ಕುಂದಾಪುರದವರೇ . ನಾನು ಮಕ್ಕಳಿಗೆ ಬಹುಶ ಕನ್ನಡ ಬರುವುದಿಲ್ಲ ಎಂದೆಣಿಸಿ ಹಿಂದಿಯಲ್ಲಿ ಮಾತಾಡಿಸಿದೆ. ಆಗ ನನ್ನ ಗೆಳತಿ ಹೇಳಿದರು " ಹೋಯ್ ,ಕನ್ನಡದಲ್ಲೇ ಮಾತಾಡ್ಸಿನಿ ಅಡ್ಡಿಲ್ಲ ಅವರಿಗೆ ಕನ್ನಡ ಬತ್ತ್ . ನಾ ಮತ್ತೆ  ಮಕ್ಕಳ ಇಲ್ಲಿಯವರ ಹಾಂಗೆ ಆಪುದ್ ಬ್ಯಾಡ ಅಂತ ಹಿಂದಿಯಾಗೆ ಮಾತಾಡ್ಸ್ತೆ . " ಅಂದರು!! ನಾನು ಮತ್ತೂ ಆಶ್ಚರ್ಯದಿಂದ ಕೇಳಿದೆ . "ಹಾಗಾದ್ರೆ ಮಕ್ಳು ಫ್ರೆಂಡ್ಸ್ ಜೊತೆ ಏನ್ ಮಾತಾಡ್ತಾರೆ?" ಅವರು ಅಷ್ಟೇ ಕೂಲಾಗಿ ಹೇಳಿದ್ರು . "ನಾನ್ ನನ್  ಮಕ್ಳ್ ನ್ನ  ಯಾರೊಟ್ಟಿಗೂ ಸೇರಸ್ತೆ ಇಲ್ಲೇ. ಹೊರಗೆ ಬಿಡ್ತೆ ಇಲ್ಲೆ. ಮನಿಯಾಗೆ T v ಇತ್ತ . lap top ಇತ್ತ್ . Time pass ಮಾಡ್ತೋ ." ನಾನು ಕನಿಕರದಿಂದ ಟೀವಿ ಯಲ್ಲಿ ಮುಳುಗಿದ್ದ ಚಿಕ್ಕ ಮಕ್ಕಳನ್ನು ನೋಡಿದೆ . ಆ ...

ಬಾಗಿಲುಗಳು

ಈಗ ಹೊಸಮನೆ ಕಟ್ಟೋ ಧಾವಂತ.ರಸ್ತೆ ಅಗಲೀಕರಣದಿಂದಾಗಿ  ಎಂದೋ  ಕಟ್ಟಬೇಕಿದ್ದ ಮನೆ ಈಗಲೇ ಕಟ್ಟಬೇಕಾಗಿದೆ.ಮನೆ ಪ್ಲ್ಯಾನು, ಮರ,ಮನೆ ಸಾಲ ಇತ್ಯಾದಿಗಳಲ್ಲಿ ಮುಳುಗಿಹೋಗುವ (!!) ಸಮಯ! ಮನೆ ಎಷ್ಟು ದೊಡ್ಡದಿರಬೇಕು,ಕೋಣೆಗಳೆಷ್ಟಿರಬೇಕು, ಕಿಟಕಿಗಳೆಷ್ಟಿರಬೇಕು, ಹೇಗಿರಬೇಕು,ಬಾಗಿಲುಗಳೆಷ್ಟು ಬೇಕು? ಇತ್ಯಾದಿಗಳ ಚರ್ಚೆ. ಬಾಗಿಲಿಗೆ ಲಕ್ಷ್ಮಿ ಚಿತ್ರ ಕೆತ್ತಿಸಬೇಕೆಂದು ಎಲ್ಲರ ಅಭಿಪ್ರಾಯ. ಇರಲಿ. ಯಾವುದೋ ಒಂದು. ಅದರ ಕೆಲಸ ಅದು ಮಾಡಿದರಾಯ್ತು. ಅಂದರೆ? ಮನೆ ಜನರನ್ನು ಕಾಯುವ ಕೆಲಸ, ನಗನಾಣ್ಯಗಳನ್ನು ಕಾಯುವ ಕೆಲಸ, ಮತ್ತೆ? ಮತ್ತೇನು ಮಾಡುತ್ತೆ ಅದು? ಮನೆ ಜನರನ್ನು ಇತರ ಜನರಿಂದ ಬೇರ್ಪಡಿಸುವ ಕೆಲಸ!? ಮನೆಯೊಳಗಿನ ವಿಚಾರಗಳನ್ನು ಮನೆಯಲ್ಲಿಯೇ ಹೂತು ಹಾಕುವ ಕೆಲಸ. ಮತ್ತಿನ್ನೆಷ್ಟೋ? ಬಾಗಿಲಿನೀಚೆಯ ವಿಚಾರಗಳು ಈಚೆಗೆ ಬಾಗಿಲಿನಾಚೆಯ ವಿಷಯಗಳು ಆಚೆಗೆ.ಅಬ್ಬ! ಬರಿ ಒಂದು ಹಲಗೆಗೆ ಮನೆ ಹಾಗು ಹೊರಗಿನ ಪ್ರಪಂಚಕ್ಕೆ ಇಷ್ಟೊಂದು ಅಂತರವನ್ನು ಸೃಷ್ಟಿ ಮಾಡುವ ಶಕ್ತಿ!            ಇತ್ತೀಚಿಗೆ ಕೆಲವರು ಕೇಳಿದರು,ನೀವ್ಯಾಕೆ ಇತ್ತೀಚಿಗೆ ಏನೂ ಬರಿತ ಇಲ್ಲ? ಅಂತ. ಉತ್ತರ ಹೇಳಲು ತಡಬಡಿಸಿದೆ. ಏಕೆಂದರೆ ಈ ಪ್ರಶ್ನೆ ಉತ್ತರಿಸಬೇಕೆಂದರೆ ಮೊದಲು ನಾನೇಕೆ ಬರಿತ ಇದ್ದೆ ಅನ್ನೋದು ಗೊತ್ತಿರಬೇಕು! ಬಹುಶಃ ನಾನೆಂದೂ ಬೇರೆಯವರು ಓದಲಿ ಎಂದು ಬರಿಲೆ ಇಲ್ಲ. ಹಾಗೆನಾದ್ರು ಇದ್ದಿದ್ರೆ ನಾನೇಕೆ ಬರಿತಾ ...

ಅಂದು ಇಂದು

ಅಂದು ಮುಂಜಾನೆದ್ದು ದೇವರ ಸ್ಮರಣೆ  ಇಂದು ಟೈಮಿಲ್ಲ ಸ್ವಾಮಿ ಎಲ್ಲಾ ಆಫೀಸಿನ ಕೆಲಸದ ಮಹಿಮೆ!! ಅಂದು ಒಳಕರೆದು ಕೂರಿಸಿ ಸತ್ಕಾರ  ಇಂದು ಕಿಟಕಿಯಿಂದಲೇ ಕೇಳ್ತಾರೆ ಸ್ವಾಮಿ ಏನ್ಸಮಾಚಾರ!!?

ಹಬ್ಬ ಹಬ್ಬ !!

ಮೂಡಣದಲಿ ಬೆಳಕು ಮೂಡುತ್ತಲೇ  ಅಂಗೈಯಲ್ಲಿ ದೇವರ ಕಂಡು  ಪತಿಯ ಕಾಲಿಗೆ ನಮಿಸಿದರೆ  ಆರಂಭವಾಯಿತು ಶುಭ ದಿನ  ಕೈ ಬಳೆಯ ನಾದದೊಂದಿಗೆ  ಬೆಸೆವ ಕಾಲ್ಗೆಜ್ಜೆಯ ನಿನಾದ  ಅದರೊಂದಿಗೆ ಸ್ಫರ್ಧಿಸುವ  ಮುದ್ದು ಚಿಣ್ಣರ ರಾಗ  ಹಬ್ಬದಡುಗೆಗೆ ಪಾಕಶಾಲೆಯಲಿ  ವಿವಿಧ ಪಾತ್ರೆಗಳ ಮೇಳ  ಜೊತೆಗೆ ಹೊರಟಿದೆ ರೊಟ್ಟಿ  ಬಡಿಯುವ ತಾಳ  ಮನೆಯಂಗಳದಿ ಧ್ವನಿಸಿದೆ  ಮಕ್ಕಳ ಗೌಜು  ನಾನೇನು ಕಡಿಮೆ ಎನುತಿದೆ  ಮನೆಯ ಚಿನ್ನಾಟದ ಕರು  ಅತಿಥಿಗಳು ಬರುವರೇ  ಅದೇನು ಸಡಗರ  ಕಳೆಗಟ್ಟಿತು ಮನೆಯಲ್ಲಿ  ಹಬ್ಬದ ವಾತಾವರಣ  ದೇವರಿಗೆ ಧೂಪದಾರತಿಯ ಪೂಜೆ  ಕೇರಿಯಲೆಲ್ಲ ಘಂಟಾ ನಿನಾದ  ಹಿರಿಯರ ಕಾಲಿಗೆ ನಮಿಸಿ  ಅತಿಥಿಗಳಿಗೆ ಉಡುಗೊರೆಯ ಸತ್ಕಾರ  ಘಮಘಮಿಸುವ ಮೃಷ್ಟಾನ್ನ  ಪಂಕ್ತಿಯಲ್ಲಿ ಸಹಭೊಜನ  ಸಂತೃಪ್ತಿಯಿಂದ ಬೀಗುವಳು ಮನೆಯೊಡತಿ  ಇರಬಾರದೇ ಹೀಗೆಯೇ ಪ್ರತಿದಿನ !!

ಅಬ್ಬಾ ಹಬ್ಬ !!

ಮೊಬೈಲ್ ಎಂಬ ಕೋಳಿ ಕೂಗಿದೊಡನೆ ಬಾಸನ್ನು ನೆನೆಯುತ ಎಂದಿನಂತೆ ಎದ್ದಾಗ ಸೆಲ್ ನ ರಿಮೈಂಡರ್ ಎಂಬ ಕಿರುಬ ಅರಚುವಾಗ ನೆನಪಾಯ್ತು  ಅಂದು ಹಬ್ಬವೆಂದು!! ಮನದಲ್ಲಿ ತುಂಬಿತು ಹರ್ಷದ ಹೊನಲು ಮಿಡ್ ವೀಕಲ್ಲಿ ಹಾಲಿಡೆಯೆಂದು ಚಕಚಕನೆ ಓಡಿತು ಮೆದುಳಲ್ಲಿ ಲಿಸ್ಟು ವೀಕೆಂಡ್ ಕಾದಿದ್ದ ಪೆಂಡಿಂಗ್ ವರ್ಕು ಮಕ್ಕಳು ಕುಣಿದರು ಸಂತೋಷದಲ್ಲಿ ಈವನಿಂಗ್ ನಲ್ಲಿ ಔಟಿಂಗ್ ಎಂದು ಹತ್ತಿಕೊಂಡಿತು ಚಿಂತೆ ಡಿನ್ನರ್ ಮ್ಯಾಕ್ ಡೊನಲ್ಡ್ ನಲ್ಲೊ ಪಿಝಾ ಹಟ್ಟಲ್ಲೊ! ಈಗ ಇರೊದೆ ತುಂಬ ಇಂಪಾರ್ಟೆಂಟ್ ವರ್ಕು ಗೆಳೆಯರಿಗೆ ಕಳಿಸುವ ಕಂಪ್ಯೂಟರ್ 'ಮೇಲ್ ' ವಿಶ್ಶು ! ಮೇಲ್ ಬಾಕ್ಸ್ ತುಂಬಿತು ರಿಪ್ಲಾಯ್ಗಳಿಂದ ಓದಿ ಅಳಿಸಿಯೂ ಆಯ್ತು ಅಂದೆ ಅಲ್ಲಿಂದ ಮನೆಯೊಡತಿ ಹಚ್ಚಿಕೊಂಡಳು ಮನೆಯ ಕ್ಲೀನಿಂಗು ಯಜಮಾನನಿಗೆ ಆಫೀಸಿನ ಕೆಲಸದ ಬರ್ಡನ್ನು ಟಿವಿಯ ಮುಂದೆ ಮಕ್ಕಳ ಸೆಲೆಬ್ರೇಷನ್ನು ಇನ್ಯಾಕೆ ಮನೆಯೊಡತಿಗೆ ಹಬ್ಬದ ಟೆನ್ಶನ್ನು!! ಅತಿಥಿಗಳು ಬಂದರೆ (!! ) ಕಳಿಸುವ ಗಡಿಬಿಡಿ ವಿಧ ವಿಧ ತಿನಿಸುಗಳಿಗೆ ಇದೆಯಲ್ಲ ಬೇಕರಿ! ದೇಗುಲಕೆ ಹೊಗುವುದು ಬಾಕಿ ಇದೆಯಲ್ಲ ದೈವ ಭಕುತಿಯನು ’ತೋರಿಸ’ಬೇಕಲ್ಲ! ಮಾಲು ಫೋರಂ ಎಂದು ತಿರುತಿರುಗಿ ಶಾಪಿಂಗು ಸುಸ್ತಾದಾಗ ಇದೆಯಲ್ಲ ಜಂಕ್ಸು ಕೋಲ್ಡ್ರಿಂಕ್ಸು! ಕಾಂಕ್ರೀಟ್ ಕಾಡಿನ ಮಧ್ಯೆ ಮಕ್ಕಳ ಗಮ್ಮತ್ತು ಕಂಡಿದೆ ಕೊಳ್ಳುಬಾಕ ಸಂಸ್ಕೃತಿಯಲ್ಲೇ ಜಗತ್ತು ಯಾವ ಹಬ್ಬವಾದರು ವ್ಯತ್ಯಾಸವೆಂತು ಅದು ಹಾಲಿಡೇ ಎಂಬುದೆ ಇಂಪಾರ್ಟೆಂಟು ಗಡಿಬಿಡಿ ಒತ್...

ಮಧ್ಯಂತರ

ನಾನು ಪರಮಸುಖಿ ಆದರೆ ಸಂತೋಷದಿಂದ ಅಳೆಯದಿರಿ ನಾನು ಸಿರಿವಂತೆ ಆದರೆ ಸ್ಥಾನದಿಂದ ಅಳೆಯದಿರಿ ನಾನು ಬಲ್ಲವಳು ಆದರೆ ಸಾಧನೆಯಿಂದ ಅಳೆಯದಿರಿ ನಾನು ದಿಟ್ಟೆ ಆದರೆ ಧೈರ್ಯದಿಂದ ಅಳೆಯದಿರಿ ನಾನು ಗುಣವಂತೆ ಆದರೆ ಅಂತಃಶಕ್ತಿಯಿಂದ ಎಂದೆಂದೂ ಅಳೆಯದಿರಿ

ಆದರೂ...

ನೆನಪುಗಳೇ ಅದ್ಹೇಗೆ ಒಂದೊಂದಾಗಿ ಸೇರುತ್ತ ಹೋಗುವಿರಿ? ಜೀವದಲ್ಲೂ ಇರುವಿರಿ ಭಾವದಲ್ಲೂ ಇರುವಿರಿ  ರಾಗದಲ್ಲೂ ಇರುವಿರಿ ತಾಣದಲ್ಲೂ ಇರುವಿರಿ ಪ್ರತಿಬಾರಿ ಆಗಮಿಸಿ ಮಧುರವಾಗಿ ಇರಿಯುವಿರಿ!!! ಆದರೂ... ಮರೆಯಬಯಸುವೆ ನಾ ಕಳೆದುಹೋದ  ದಿನಗಳಲ್ಲಿ ಕಳೆದುಹೋದುದನ್ನ! ಹೊದೆಯಬಯಸುವೆ ನಿರ್ಲಿಪ್ತವಾಗಿ  ಕಟುವಾಸ್ತವದ ಕಂಬಳಿಯನ್ನ  ಆದರೂ.... ಸೆರಗ ಚಾಚಿರುವೆ ಆಸೆಯಿಂದ ನಿಮ್ಮ  ಜನ್ಮದಿನಗಳನ್ನು ಬಾಚಿ ತುಂಬಿಸಲು  ತಿಳಿದಿದ್ದರೂ ಆ ಮಡಿಲು ಎಂದೆಂದಿಗೂ  ತುಂಬಲಾರದೆಂದು!!  ಆದರೂ.. ಸಹಿಸೆನು ಈ ನೆನಪುಗಳ ಇರಿತ ಆದರೂ  ಬಿಡೆನು ಎಂದಿಗೂ ನಿಮ್ಮನ್ನು  ಮೆಲುಕುವ ಸವಿಯ!!  ಇದೆಂಥ ಹಿಂಸೆ ಇದೆಂಥ ಹುಚ್ಚು!? ಮರೆವೇ ಇಡಿಯಾಗಿ ಆವರಿಸಿಬಿಡಲಾರೆಯಾ ನನ್ನ?!!

Super woman!!

ಆಫೀಸಿನಲ್ಲಿ  ಎಲ್ಲರಿಂದ ಸಲಾಂ  ಹೊಡೆಸಿಕೊಳ್ಳುವ ಧೀರ ವನಿತೆ ಮನೆಯಲ್ಲಿ  ಕೆಲಸದಾಕೆಗೆ ಸಲಾಂ ಎಂದಳು!!!!

ವಿರೋಧಾಭಾಸ

ಸಂಪ್ರದಾಯಸ್ಥ  ಹಿರಿಯರು ಹೇಳಿದರು ನನ್ನ ಜಾತಿಯ ಬಿಟ್ಟು ಹೊರಗಿನವರಲ್ಲಿ  ತೊಟ್ಟು ನೀರು ಕುಡಿಯುವುದು ಅಸಂಭವ! ಜೀವ ಹೋಗುವ ಸಂದರ್ಭದಲ್ಲಿ ಹೇಳಿದರು  ವೈದ್ಯರ ಜಾತಿ ಯಾವುದಾದರೇನು  ವೈದ್ಯೋ ದೇವೋ ಭವ!!!!

ಸಧ್ಯದ ದರದು.

            ಜೀವನದ  ಪ್ರತಿಯೊಂದು ಘಳಿಗೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಾಲದ ಗಣನೆಯಲ್ಲಿ ವರ್ತಮಾನ ಕಾಲವೆಂಬುದೆ ಇಲ್ಲ. ಭೂತ ಮತ್ತು  ಭವಿಷ್ಯದ  ಅತಿ ತೆಳ್ಳನೆಯ ಕೂದಲು ಗಾತ್ರದ ಎಳೆ ಇದು . ಆದರೆ ನಾವು ಯಾವಾಗಲೂ ಭೂತ ಭವಿಷ್ಯ ಗಳ  ಲೋಕದಲ್ಲೇ  ವಿಹರಿಸುತ್ತ  ಇರುತ್ತೇವೆ.ಅತಿ  ಪ್ರಮುಖವಾದ   ವರ್ತಮಾನ  ವನ್ನು ಯೋಚಿಸಲು ಚಿಂತಿಸಲೂ  ನಮಗ ವೇಳೆ ಇಲ್ಲ. ಈ ವರ್ತಮಾನ ವನ್ನು ವಿಸ್ತಾರ ಗೊಳಿಸುವ ಆಲೋಚನಯೇ ನಮಗಿಲ್ಲ. ಆದರೆ ಈ  ಜೀವನದ ವ್ರಮುಖ ಸಂಗತಿ  ಯಲ್ಲೇ ನಮ್ಮ ಸುಖ ಶಾಂತಿ ಅಡಗಿರುತ್ತದೆ .ಇಂದು ಇಂದಿಗೆ ನಿನ್ನೆ ನಿನ್ನೆಗೆ ಇರಲಿ ನಾಳೆಯು ನಾಳೆಗೆ ಎಂಬ ಸೂತ್ರವನ್ನು  ಶೀಘ್ರ ವಾಗಿ ಅಳವಡಿಸಿಕೊಳ್ಳುವ ಅಗತ್ಯತೆ ಈಗ ನಮ್ಮ ಮುಂದಿದೆ.ನನ್ನ ದೃಷ್ಟಿ ಎಲ್ಲಿಯ ವರೆಗೂ ಹಾಯು ತ್ತದೋ ಅಲ್ಲಿಯ ವರೆಗಿನ ನೋಟ ನನ್ನದು ,ದೂರದ ಮಂಜು ಮುಸುಕಿದ ದಿಗಂತ ವಲ್ಲ.ಸಧ್ಯದ ಕಣ್ಣೆದುರಿಗಿನ ಹಿಡಿದ ಕೆಲಸ ಮುಗಿಸುವ ಹೊರೆ ಇದ್ದಾಗ ಅದರ ಮುಂದಿನ ಆಲೋಚನೆ ನಮಗೇಕೆ ,ಅಲ್ಲವೇ?                                 ...

ಎದೆಯೊಳಗಿನ ಹಣತೆ

ಎತ್ತಣೆತ್ತಣವೂ ಸುಡುವ ಬಿಸಿಲ ಬೇಗೆಗೆ ಉರಿಯುತ್ತಿರುವ ನೆತ್ತಿಯ ಎತ್ತಿ ಕಣ್ಣು ಕೀಲಿಸಿದರೂ ತೋರಲಿಲ್ಲವೆಲ್ಲಿಯೂ ತಂಪೆರೆವ ತಂಪಲು. ಬೀಸುತ ಎದುರಾಗುವ ಬಿರುಗಾಳಿಗೆ ಎದೆಯೊಡ್ಡಿ ತೂರಿ ಬರುತ್ತಿರುವ ಧೂಳಿಗೆ ಕಣ್ಣೊಡ್ಡಿ ಕಾಯುತಿದ್ದರೂ ಸೋಕಲಿಲ್ಲವೆಂದೂ ಮುದ ನೀಡುವ ತಂಗಾಳಿ. ಒಮ್ಮೊಮ್ಮೆ ಒಂಟಿಯಾಗಿ ಮತ್ತೊಮ್ಮೆ ಜಂಟಿಯಾಗಿ ಎಡುವುತೇಳುತ ಸಾಗುತಿದ್ದರೂ ಕಾಣಲಿಲ್ಲವೆಂದೂ ತೀರದ ದೂರದ ಕೊನೆ. ಬರಿಗಾಲ ತುಂಬ ಮುಳ್ಳುಗಳು ಕೊರೆದ ಚಿತ್ತಾರ ಏರಿದಷ್ಟೂ ತಲುಪದ  ಗಿರಿಶಿಖರ  ಕರಿಮೋಡದ ಸುತ್ತ ಕಂಡೂ ಕಾಣದ ಬೆಳ್ಳಿಯ ಆವರಣ ಮೈ ಬಣ್ಣ ಮಾಸಿದರೂ, ನಾಲಗೆ ಪಸೆ ಆರಿದರೂ,ತಲೆಗೆದರಿ ಹರಡಿಡರೂ, ಕಣ್ಣುಗಳು ಕೆಂಪೇರಿದರೂ, ಆರಲಿಲ್ಲವೆಂದೂ ಎದೆಯೊಳಗಿನ ಹಣತೆ.

ಸಂಗಾತಿ

Image
ಮನಸಿನ ಪರದೆಯಲಿ ಯಾರೂ ಇರದಾಗ ಬಹುಮೆಲ್ಲನೆ ನಡೆದು ಬಂದು ಎಂದೂ ಅಳಿಸಲಾಗದಂಥ ಹೆಜ್ಜೆಗುರುತು ಮೂಡಿಸಿ ಬಿಟ್ಟೆ. ಭದ್ರತೆಯೆಂಬ ಸಿಂಹಾಸನದಲಿ ಭದ್ರವಾಗಿ ಕೂರಿಸಿ ಸುತ್ತಲೂ ಕನಸುಗಳಿಂದ ಹೆಣೆದ ಸುಭದ್ರವಾದ ಕೋಟೆ ಕಟ್ಟಿದೆ ನನ್ನಯ ಒಂದೊಂದು ಕಣ್ಣೀರಿನ ಹನಿಯೂ ಸೋಲೆಂದು ಭಾವಿಸಿ ಲೆಕ್ಕ ತಪ್ಪದಂತೆ ಹೆಕ್ಕಿ ಬೊಗಸೆಯಲಿಟ್ಟುಕೊಂಡು ನಿರಂತರ ಅದರೆದುರು ಸೆಣಸುತ್ತಲಿರುವೆ ಭರವಸೆ ಕಳೆದುಕೊಂಡು ದಿಕ್ಕು ತಪ್ಪಿ ದೈನ್ಯದಲಿ ನಿಂತಾಗ ಕೈ ತೋಳಿನಾಸರೆ ನೀಡಿ ಎದೆಗಾನಿಸಿ ನೂರಾನೆ ಬಲ ತುಂಬುವೆ ಸಂತಸದ ಕ್ಷಣಗಳಲಿ ನಾ ನಗುವ ಪರಿ ಕಂಡು ಗೆದ್ದ ಭಾವ ತುಂಬಿಕೊಂಡು ಮಂದಹಾಸ ಬೀರುತ ಸಮಾಧಾನದ ನಿಟ್ಟುಸಿರ ಬಿಡುವೆ ಸದಾ ಹಿಂಬಾಲಿಸುವ ನಿನ್ನ ಕಣ್ಣುಗಳಲ್ಲಿ ಯಾವ ಯಾವ ಅರ್ಥ ಹುಡುಕಲಿ? ಆರಾಧನೆಯೇ ಪ್ರೀತಿಯೇ ಕಾಳಜಿಯೇ ಒಡೆತನವೇ ಅಥವಾ ಎಲ್ಲವೂ ಬೆರೆತ ಅಚ್ಚ ಶ್ವೇತವರ್ಣದ ಕಾಂತಿಯೇ ? ಇದಕೂ ಮೀರಿದನು ಬಯಸಿ ನಾ ಖಂಡಿತಾ ಸ್ವಾರ್ಥಿಯಾಗಲಾರೆ

ನಿರೀಕ್ಷೆಗಳು

ಅಂತ್ಯವೆಂದುಕೊಂಡದ್ದು ಆರಂಭವಾದಾಗ ಹುಟ್ಟುವವು ಹೊಸ ನಿರೀಕ್ಷೆಗಳು ಕಡಲ ತೀರಕೆ ತೆರೆ ಅಪ್ಪಳಿಸುವಂತೆ ಪ್ರತಿ ಬಾರಿಯೂ ಹೊಸ ನಿರೀಕ್ಷೆಯೊಂದಿಗೆ ಎಲ್ಲೆಲ್ಲೂ ನಿರೀಕ್ಷೆಗಳು ಎಲ್ಲರಲ್ಲಿಯೂ ನಿರೀಕ್ಷೆಗಳು ನಮ್ಮಲ್ಲೂ ನಿರೀಕ್ಷೆಗಳು ನಮ್ಮವರಲ್ಲೂ ನಿರೀಕ್ಷೆಗಳು ಒಂದರ ಸಾವು ಅದರ ಬೆನ್ನಲ್ಲೆ ಹುಟ್ಟು ಅಂತ್ಯವೆಂಬುದೆ ರೋಚಕ ಆರಂಭ ಎಲ್ಲಿಯೂ ಹೊಸತನವೆಂಬುದು ಮಾತ್ರವಿಲ್ಲ ಕೆಲವರ ನಿರೀಕ್ಷೆಗಳಿಗೆ ಸಂತನ ಮುಖವಾಡ ಇನ್ನು ಕೆಲವರ ನಿರೀಕ್ಷೆಗಳು ದಬ್ಬಾಳಿಕೆಯ ಆಗರ ಹೇಗಿದ್ದರೂ ಪರಿಣಾಮ ಮಾತ್ರ ನಿಶ್ಚಿತ ಕಣ್ಣೀರು ಇಲ್ಲವೇ ಆನಂದಭಾಷ್ಪ ಕೆಲವರು ನಿರೀಕ್ಷೆಗಳೊಂದಿಗೆ ಬದುಕಿ ಸತ್ತರು ಹಲವರು ನಿರೀಕ್ಷೆಗಳೊಂದಿಗೆ ಬದುಕಿಯೂ ಸತ್ತರು ಪ್ರತಿ ಬಾರಿ ಪುನಶ್ಚೇತನ ಹೊಸ ನಿರೀಕ್ಷೆಯ ಹುಟ್ಟಿನೊಂದಿಗೆ ಎಲ್ಲಿಯವರೆಗೆ..... ಆರಂಭ ಎಂದುಕೊಂಡದ್ದು ಅಂತ್ಯವೆಂದೆನಿಸುವವರೆಗೆ

ಆ ಕ್ಷಣ

ಆ ಕಣ್ಣುಗಳಿಂದ ಹೊರಟ ಸುರೆಯು ನೇರ ಮನದೊಳಿಳಿದೊಡೆ ದೇಹದೊಳೆಲ್ಲ ಸಣ್ಣ ನಡುಕವೇರಿ ಇಹಪರವನೆಲ್ಲ ಮರೆಸಿ ಬಾನುಭುವಿಗಳೊಂದಾಗಿ ಕೈಗೆ ಕೈ ಸೇರಿಸಿ ತಮ್ಮೆಡೆಗೆ ಬರಸೆಳೆದು ತೇಲಿಸಿ ಇಗೋ ಕಾಣು ಇಲ್ಲೊಂದು ನೀನರಿಯದ ಅತಿ ಮೋಹಕ ಪ್ರಪಂಚವುಂಟು ಎಂದಾಗ..... ಕೈ ಚಿವುಟಿಕೊಂಡು ನಾನೆಂದೆ ಹೇ ಮರುಳು ಮನವೇ! ನೀನೆಲ್ಲಿರುವೆ ?!!

ನಿರ್ಲಿಪ್ತ

ಹಸಿರೆಲೆಯೊಂದು ಸಾಗುತಿದೆ ಮುಳುಗುತೇಳುತ ನದಿಯಲಿ ಎತ್ತಣಪಯಣವೆಂಬುದನರಿಯದೆ ಅಲೆಯೊಡನೆ ಅಲೆಯಾಗಿ ಶಿಲೆಯೊಡನೆ ಶಿಲೆಯಾಗಿ ಕಸದೊಡನೆ ಕಸವಾಗಿ ನೇಸರನೊಡನೆ ರಂಗಾಗಿ ದಿಕ್ಕು ದೆಸೆಯಿಲ್ಲ ದಾರಿಗೊಂದು ಗುರಿಯಿಲ್ಲ ಸಾಗುವ ಹಠವಿಲ್ಲ ನಿಲ್ಲುವ ಆಸೆಯೂ ಇಲ್ಲ ಸವೆದ ಹಾದಿಯಲಿ ಹೆಜ್ಜೆಯ ಗುರುತೂ ಇಲ್ಲ ಯಾರು ಬಲ್ಲರು ಯಾವ ಮರದ ಹೆಮ್ಮೆಯಾಗಿತ್ತೆಂದು ಯಾರು ಸೆಳೆದು ಬಿಟ್ಟರೆಂದು ಎಷ್ಟು ದಿನದ ಪಯಣವೆಂದು ಸಾಗುತಲೇ ಇದೆ ನೀರಿನೊಡನೆ ತಡೆಯುವರೆಂಬ ಭಯವಿಲ್ಲ ತಡೆದರೂ ಬೇಸರವಿಲ್ಲ ಬಳುಕುತ ಈಜುವ ಬಗೆ ಮಾತ್ರ ಗೊತ್ತು ಅದುವೆ ನಿರ್ಲಿಪ್ತ ಪ್ರಯಾಣಿಕ!

ಮೌನದ ಮಾತು

" ಮೌನ " ಎಂದೊಡನೆ ನೆನಪಾಗುವುದು , ಶಾಲಾ ದಿನಗಳಲ್ಲಿ ಯಾರಾದರು ದೇಶದ ನೇತಾರರು ಭೂಲೋಕ ತ್ಯಜಿಸಿದಾಗ , ಅದರ ಶೋಕಾಚರಣೆ ಪ್ರಯುಕ್ತ ( ಶಾಲೆಗೆ ರಜೆ ಎಂಬ ಖುಶಿಯೊಡನೆ !) ಆಚರಿಸುವ ಮೌನಾಚರಣೆ . ಒಂದು ನಿಮಿಷ ಇಡೀ ಶಾಲೆಯ ಮಕ್ಕಳು ಸದ್ದಿಲ್ಲದೆ ಮೌನ ಆಚರಿಸುವಾಗ ಆವರಿಸುವ ನಿಶ್ಯಬ್ದ , ಅಸಹಜ , ಕೃತಕವೆನಿಸಿ ನಗು ಉಕ್ಕಿ ಬರುತಿತ್ತು . ಆಚೀಚೆ ಕಣ್ಣು ಹಾಯಿಸುತ್ತಾ ನಗೆ ತಡೆದು ತಡೆದೂ ಸಾಕಾಗಿ ಕಡೆಗೊಂದು ಸಾರಿ ( ಒಂದು ನಿಮಿಷವಾಗುವ ಮೊದಲೆ !) " ಫುಕ್ " ಎಂದು ನಕ್ಕು ಬಿಟ್ಟು ಟೀಚರರ ಕೆಂಗಣ್ಣಿಗೆ ಗುರಿಯಾದದ್ದಿದೆ . ಗೆಳತಿಯರೊಡನೆ ಜಗಳವಾದಾಗ , ಟೀಚರುಗಳು ಬೈಯುವಾಗ , ಅಪರಿಚಿತರು ಮನೆಗೆ ಬಂದಾಗ .. ಇತ್ಯಾದಿ ಸಂದರ್ಭಗಳಲ್ಲಿ ಮೌನಕ್ಕೇ ಶರಣು . ಚಿಕ್ಕವಳಿರುವಾಗ ಅಮ್ಮ ಸಣ್ಣ ಪುಟ್ಟ ವಿಷಯಗಳಿಗೂ ಬೈಯುವಾಗ ನಾನು ಯಾವುದಕ್ಕೂ ಉತ್ತರವೇ ನೀಡದೆ ಮಾತು ಮರೆತಂತೆ ಮೌನವಹಿಸುವಾಗ ಅಮ್ಮನಿಗೆ ಸೋತ ಭಾವ ಆವರಿಸಿ ಮೈಯೆಲ್ಲ ಪರಚಿಕೊಳ್ಳುವಂತಾಗುತಿತ್ತು . ಹೀಗೆ ಮೌನವೂ ಒಂದೊದು ಸಾರಿ ಅಸ್ತ್ರದಂತೆ ಉಪಯೋಗವಾಗುವುದಿದೆ ( ನನಗೆ !). ಹಾಗೆಯೇ ಮಾತಾಡುವ ಸಂದರ್ಭದಲ್ಲಿ ಮಾತಾಡದೆ ಮೌನವಹಿಸಿ ಸೋತದ್ದೂ ಇದೆ , ಕಳೆದುಕೊಂಡದ್ದೂ ಇದೆ !! ಮೌನ ಕೆಲವೊಂದು ಬಾರಿ ಅಸಹನೀಯ , ಕೆಲವೊಮ್ಮೆ ಸುಂದ...

ಹೀಗೊಂದು ಕಥೆ

ಒಂದೂರಿನಲ್ಲಿ ಒಂದು ಪುಟ್ಟ ಹುಡುಗಿ ಇದ್ದಳು. ಅವಳ ಹತ್ತಿರ ಅವಳಷ್ಟೇ ಪುಟ್ಟದಾದ ಒಂದು ಗೊಂಬೆ ಇತ್ತು. ಆ ಗೊಂಬೆ ಎಂದರೆ ಅವಳಿಗೆ ಪಂಚಪ್ರಾಣ.ಅದನ್ನು ಬಿಟ್ಟಿರಲಾರದಷ್ಟು ಪ್ರೀತಿ.ತಿನ್ನುವಾಗ, ಮಲಗುವಾಗ ಆಡಲು ಎಲ್ಲದಕ್ಕೂ ಅವಳಿಗೆ ಆ ಗೊಂಬೆ ಬೇಕೇ ಬೇಕು.ಎಲ್ಲೇ ಹೋದರು ಅದನ್ನು ತನ್ನ ಸಂಗಡ ಕರೆದೊಯ್ಯುತ್ತಿದ್ದಳು. ಹೀಗೆ ಒಮ್ಮೆ ಅಜ್ಜನ ಮನೆಗೆ ಹೋದಾಗ ಯಾರೋ ಆ ಗೊಂಬೆಯನ್ನು ಕದ್ದುಬಿಟ್ಟರು.ಹುಡುಗಿಯ ಸಂಕಟ ಹೇಳತೀರದು.ಯಾರು ಎಷ್ಟು ಸಮಾಧಾನಿಸಿದರೂ ಆ ಹುಡುಗಿ ತನಗೆ ಅದೇ ಗೊಂಬೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಳು. ದಿನಗಟ್ಟಳೆ ಅದನ್ನೆ ನೆನೆಯುತ್ತಾ ದುಖಃ ಸಾಗರದಲ್ಲಿ ಮುಳುಗಿದಳು..ಅವಳ ತಂದೆ ಒಂದಲ್ಲ ಎರಡಲ್ಲ ನಾಲ್ಕು ಗೊಂಬೆಗಳನ್ನು ತಂದು ಕೊಟ್ಟರೂ ಹುಡುಗಿಗೆ ತೃಪ್ತಿಯಾಗಲಿಲ್ಲ. ದಿನಗಳು ಕಳೆದರೂ ಹುಡುಗಿಗೆ ಅದರ ನೆನಪು ಮಾಸಲಿಲ್ಲ. ಹಾಗೆಯೆ ಪರಿಸ್ಥಿತಿಗೆ ಹೊಂದುಕೊಂಡಳು. ಆದರೂ ಮನದಲ್ಲಿ ಆ ಗೊಂಬೆಯನ್ನು ಕಳೆದುಕೊಂಡ ವೇದನೆ ಉಳಿದುಕೊಂಡಿತ್ತು.ಮೊದಲಿನ ಉತ್ಸಾಹ ಮಾಯವಾಗಿತ್ತು.ಒಮ್ಮೊಮ್ಮೆ ಅದರ ನೆನಪು ಉಕ್ಕಿ ಬಂದು ಅಳುತ್ತಾ ಕುಳಿತು ಬಿಡುವಳು. ಹೀಗೆ ಒಂದು ವರ್ಷ ಕಳೆಯಿತು. ಅಚ್ಚರಿಯೆಂಬಂತೆ ಆ ಗೊಂಬೆ ಅವಳ ತಂದೆಗೆ ಮರಳಿ ಸಿಕ್ಕಿತು.ಅವರು ಅತೀವ ಆನಂದದಿಂದ ಮಗಳಿಗೆ ತಂದುಕೊಟ್ಟರು.ಆಗ ಆ ಹುಡುಗಿಯ ಸಂತಸ ಹೇಳತೀರದು.ಆ ಗೊಂಬೆ ಈಗ ಮೊದಲಿನಂತಿರದೆ ಬಣ್ಣ ಮಾಸಿತ್ತು. ಅಲಲ್ಲಿ ಹರಿದಿತ್ತು. ಆದರೂ ಹುಡುಗಿಗೆ ಗೊಂಬೆ ಸಿಕ್ಕ ಸಂತೋಷದಲ್ಲಿ ಅದ್ಯಾವುದೂ...

ಪರಿಧಿಯ ಅಂಚಿನಲ್ಲಿ

ತುಂಬಿದ ಹೃದಯಕೆ ಹರಿಸಲು ಬೇಕಿದೆ ಒಂದು ದಾರಿ ಕ್ಷೀಣ ಸ್ವರದಿಂದ ತೇಲಿ ಬಂತೊಂದು ಅಸ್ಪಷ್ಟ ಕರೆ ನನ್ನೊಳಗಿನ ಪ್ರಪಂಚದಲ್ಲೆ ನಾನು ಹಲವರಿಗೆ ನನ್ನೊಳಗೆ ನಾನಿಲ್ಲದಿರುವ ಅರಿವು ಏನಾಗುತಿದೆ...... ಬಿಸಿಯುಸಿರೊಂದು ಜೊತೆಯಾಗಿ ಸದಾ ಬೆಂಬಿಡದೆ ಕಾಡುವಾಗ ಕಣ್ಣಂಚಲಿ ಮೂಡುವ ನಗೆಯನು ಮರೆಮಾಚುವ ಮುನ್ನ ನಾನಾರೆಂಬುವ ಪ್ರಶ್ನೆ ಕಾಮನಬಿಲ್ಲಿಗೆ ಕೊಡೆಯೇ ಅಡ್ಡ ಬದುಕಿನಲ್ಲಿ ಭ್ರಮೆಗಳೊ ಬದುಕೇ ಭ್ರಮೆಯೋ ಎಂದರಸುವ ಆತುರದಲ್ಲಿ ಕೂಡಿ ಕಳೆವ ಲೆಕ್ಕಾಚಾರದಲ್ಲಿ ನಮ್ಮನ್ನೇ ಇಂಚಿಂಚಾಗಿ ಕೆಳೆದುಕೊಳ್ಳುವಾಗ ಅಚ್ಚರಿ ಎನಾಗುತ್ತಿದೆಯೆಂದು ನಿರ್ವಾತದಲಿ ರೆಕ್ಕೆ ಪುಕ್ಕ! ಅವರಿವರಿಂದ ನಾವು ನಮ್ಮಿಂದ ಮಗದೊಬ್ಬರು ವರ್ತುಲದೊಳಗೊಂದು ವರ್ತುಲ ಅದಕೊಂದು ಹೆಸರು ಪರಿಧಿಯಲ್ಲಿ ನಿಂತ ಹೆಜ್ಜೆ ಆದರೂ ಮನದಲ್ಲಿ ಹರುಷ ದಿಗಂತದಾಚೆಗಿನ ಪ್ರಪಂಚ ಎಂದೆಂದೂ ಸುಂದರ.

ಬಪ್ಪ್ರ್ಯಲ್ಲಾ ಕುಂದಾಪ್ರಕ್ಕೆ!

( ಧಾರವಾಡದ ಹೋಗ್ರಿ , ಬರ್ರಿ , ಮೈಸೂರು ಸೀಮೆಯ ಹೋಗಿ , ಬನ್ನಿ ಎಂಬುದು ನಾನು ಬಾಲ್ಯದಿನ್ದಲೂ ಕೇಳಿ ಕಲಿತ ಭಾಷೆ . ಆದರೆ ಕುಂದಾಪುರದ ( ಕುಂದಾಪ್ರ !) ಹೋಯ್ಕ , ಬರ್ಕ ಮಾತ್ರ ತೀರಾ ಅಪರಿಚಿತವಾಗಿತ್ತು . ಮೊದಮೊದಲಿಗೆ ಇದು ಕನ್ನಡವೇನಾ ಎಂಬಷ್ಟು ಗೊಂದಲ . ಈ ಭಾಷೆಗೆ , ಅದರ ವೇಗಕ್ಕೆ ಹೊಂದಿಕೊಂಡು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ ( ಮಾತಾಡುವುದಂತೂ ದೂರದ ಮಾತು !!) ಭರ್ತಿ ಎರಡು ವರ್ಷ ಬೇಕಾಯ್ತು ! ನೋಡಿ ಈಗ ಆ ಭಾಷೆಯಲ್ಲಿ ಬರೆಯುತ್ತಿದ್ದೇನೆ ( ಪ್ರಯತ್ನಿಸುತ್ತಿದ್ದೇನೆ ಎಂಬುದೇ ಸರಿ !!) ಅಂದರೆ ನನಗೆ ( ನಾನೆ !!) ಶಹಬ್ಬಾಸ್ ಹೇಳಲೇಬೇಕು !! ನಮ್ಮೂರಿನ ಹಿರಿಯರೊಬ್ಬರು ಬಹಳ ದಿನಗಳ ನಂತರ ಕಂಡಾಗ ನನ್ನನ್ನು ಮಾತಿಗೆಳೆದದ್ದು ಹೀಗೆ .) ಹ್ವಾಯ್ ಹೇಂಗಿದ್ರಿ ? ಎಂಥ ಕಾಂಬುಕಿಲ್ಲೆ ?...... ಅಮ್ಮನ್ ಮನೀಗ್ ಹೋಯಿರ್ಯಾ ?... ಇಲ್ಯಾ ? ಮತ್ತೆ ?.... ಹೌದಾ . ಮಕ್ಕಳ ಎಂಥ ಮಾಡ್ತೊ ? ಹಿರಿಯಂವ ಶಾಲೆಗ್ ಹೋತ್ನಲ್ದ ? ಕಿರ್ದ್ ? ಎರಡ್ ವರ್ಶ ಆಯ್ತಾ ?..... ಮಸ್ತ್ ಮಾತಾಡ್ತ್ಲ್ ಅಂಬ್ರಲಾ ?.... ದೊಡ್ ಮಗ ಈಗ ಹುಷಾರಾಗಿದ್ನಾ ? ಸಣ್ಕಿಪ್ಪತ್ತಿಗೆ ಅಂವಂಗೆ ಹುಷಾರಿರ್ತೇ ಇರ್ಲಿಲ್ಲಲ್ಲಾ . ಈಗ ಅಡ್ಡಿ ಇಲ್ಯಾ ?....... ಈಗ ಅದೆಂಥದೊ ಹಂದಿಜ್ವರ ಅಂಬ್ರಲಾ ! ಎಲ್ಲ ಕಡಿಗೂ ಇತ್ತಂಬ್ರಲಾ ! ಎಶ್ಟ್ ಜನ ಸತ್ ಹೋಯಿರಂಬ್ರಲಾ ಅಲ್...