ಈವತ್ತು 27 ಮೇ 2020, ಬುಧವಾರ. ಐದು ವರ್ಷಗಳ ನಂತರ ಬ್ಲಾಗ್ ಬರೆಯುತ್ತಿದ್ದೇನೆ. ಕಾರಣ, ಈ ವರ್ಷದಲ್ಲೊಂದು ವಿಶೇಷವಿದೆ. ಅದಕ್ಕೆ ಕಾರಣ ಕೊರೊನ ಎಂಬ virus. 😨 .ವಿಶ್ವದೆಲ್ಲೆಡೆ ಸುದ್ದಿ ಮಾಡುತ್ತಿರುವ ಕೊರೊನ ನನ್ನ blogspot ನಲ್ಲಿ ಸದ್ದು ಮಾಡದಿದ್ದರೆ ಹೇಗೆ!? ☺️☺️. ನನ್ನ ಕನ್ನಡ ವೀಕ್ ಆಗಿರುವುದು ಅನುಭವಕ್ಕೆ ಬರುತ್ತಿದೆ. ಹಾಗಾಗಿ ಇಂಗ್ಲಿಷ್ ಮಿಶ್ರಿತ ಕನ್ನಡ ಅಂದ್ರೆ ಕಂಗ್ಲೀಷ್ ಭಾಷೆಯಲ್ಲಿ ಬರೆಯುತ್ತಿದ್ದೇನೆ. ಕಳೆದ ಮೂರು ತಿಂಗಳಿಂದ ಕಳೆಯುತ್ತಿರುವ ಸಮಯ, ಬಹಳ ಭಿನ್ನವಾಗಿದೆ. ಇಡೀ ಪ್ರಪಂಚವೇ ಬೀಗ ಜಡಿದು ಮನೆಯಲ್ಲಿ ಕುಳಿತಿದ್ದು ಇದೆ ಮೊದಲು ಇರಬೇಕು. ನನ್ನ ಅಪ್ಪನ ಕಾಲದಲ್ಲಿಯೂ ಈ ರೀತಿಯಾಗಿರಲಿಲ್ಲವಂತೆ. ಹಾಗಾಗಿ ಈ ಸಂದರ್ಭವನ್ನು, ಈ ಕಾಲವನ್ನು record ಮಾಡಬೇಕು ಎನ್ನುವುದೇ ನನ್ನ ಉದ್ದೇಶ. ವರ್ಷದ ಆರಂಭದಲ್ಲಿ ಎಲ್ಲವೂ ಮಾಮೂಲಿಯಂತೆ ಇತ್ತು. ಮಗ ಕರಣ್ 10th ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ನಾವು ಗಂಡ ಹೆಂಡತಿ ಬೇಸಿಗೆ ರಜೆಯಲ್ಲಿ ಲೇಹ್ ಮತ್ತು ಲಧಾಕ್ ಟೂರ್ ಪ್ಲಾನ್ ಮಾಡೋದ್ರಲ್ಲಿ busy. ಮಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಬಹುಶಃ ಫೆಬ್ರುವರಿ ಯಲ್ಲಿ ಇರ್ಬೇಕು, ಚೀನಾದಲ್ಲಿ ಹೊಸ virus ಬಂದಿದೆಯಂತೆ ಎಂದು ಮೊದಲ ಬಾರಿ ಕೇಳಿದ್ದು. ನಂತರದ ದಿನಗಳಲ್ಲಿ ಚೀನಾದಲ್ಲಿ ಆಗುತ್ತಿರುವ ಹಾಗೂ ಉತ್ಪ್ರೇಕ್ಷೆ...
ಇತ್ತೀಚಿಗೆ ಹೊಸ ವ್ಯಕ್ತಿಯೋರ್ವರ ಪರಿಚಯವಾಯ್ತು. ಅವರು ಮುಂಬಯಿಯವರು. ಇಲ್ಲಿ ಅಂದರೆ ಕುಂದಾಪುರಕ್ಕೆ ಬಂದು ಎರಡು ವರ್ಷಗಳು ಸಂದಿವೆ ಅಂತೆ. ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಮಿನಿ ಮುಂಬೈ ದರ್ಶನವಾಯ್ತು. ಮಕ್ಕಳು ಹಿಂದಿಯಲ್ಲಿಯೇ ಮಾತನಾಡುತ್ತಿದ್ದರು. ನನ್ನ ಸೊ ಕಾಲ್ಡ್ ಗೆ ಗೆಳತಿ ಮಕ್ಕಳೊಡನೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತಾಡುತ್ತಿದ್ದರು. ಕೆಲಸದ ಜನರು ಸಹಿತ ಹಿಂದಿಯೇ ಮಾತಾಡುತಿದ್ದರು! ನನಗೆ ಅಚ್ಚರಿಯಾಯಿತು. ನನಗೆ ತಿಳಿದ ಹಾಗೆ ಅವರು ಮೂಲತ ಕುಂದಾಪುರದವರೇ . ನಾನು ಮಕ್ಕಳಿಗೆ ಬಹುಶ ಕನ್ನಡ ಬರುವುದಿಲ್ಲ ಎಂದೆಣಿಸಿ ಹಿಂದಿಯಲ್ಲಿ ಮಾತಾಡಿಸಿದೆ. ಆಗ ನನ್ನ ಗೆಳತಿ ಹೇಳಿದರು " ಹೋಯ್ ,ಕನ್ನಡದಲ್ಲೇ ಮಾತಾಡ್ಸಿನಿ ಅಡ್ಡಿಲ್ಲ ಅವರಿಗೆ ಕನ್ನಡ ಬತ್ತ್ . ನಾ ಮತ್ತೆ ಮಕ್ಕಳ ಇಲ್ಲಿಯವರ ಹಾಂಗೆ ಆಪುದ್ ಬ್ಯಾಡ ಅಂತ ಹಿಂದಿಯಾಗೆ ಮಾತಾಡ್ಸ್ತೆ . " ಅಂದರು!! ನಾನು ಮತ್ತೂ ಆಶ್ಚರ್ಯದಿಂದ ಕೇಳಿದೆ . "ಹಾಗಾದ್ರೆ ಮಕ್ಳು ಫ್ರೆಂಡ್ಸ್ ಜೊತೆ ಏನ್ ಮಾತಾಡ್ತಾರೆ?" ಅವರು ಅಷ್ಟೇ ಕೂಲಾಗಿ ಹೇಳಿದ್ರು . "ನಾನ್ ನನ್ ಮಕ್ಳ್ ನ್ನ ಯಾರೊಟ್ಟಿಗೂ ಸೇರಸ್ತೆ ಇಲ್ಲೇ. ಹೊರಗೆ ಬಿಡ್ತೆ ಇಲ್ಲೆ. ಮನಿಯಾಗೆ T v ಇತ್ತ . lap top ಇತ್ತ್ . Time pass ಮಾಡ್ತೋ ." ನಾನು ಕನಿಕರದಿಂದ ಟೀವಿ ಯಲ್ಲಿ ಮುಳುಗಿದ್ದ ಚಿಕ್ಕ ಮಕ್ಕಳನ್ನು ನೋಡಿದೆ . ಆ ...
Comments
Post a Comment