Posts

Showing posts from January, 2015

ನೀವ್ ಏನ್ ಹೇಳ್ತೀರಾ ?

      ಇತ್ತೀಚಿಗೆ ಹೊಸ ವ್ಯಕ್ತಿಯೋರ್ವರ ಪರಿಚಯವಾಯ್ತು.  ಅವರು ಮುಂಬಯಿಯವರು. ಇಲ್ಲಿ ಅಂದರೆ ಕುಂದಾಪುರಕ್ಕೆ ಬಂದು ಎರಡು ವರ್ಷಗಳು ಸಂದಿವೆ ಅಂತೆ. ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಮಿನಿ ಮುಂಬೈ ದರ್ಶನವಾಯ್ತು. ಮಕ್ಕಳು ಹಿಂದಿಯಲ್ಲಿಯೇ ಮಾತನಾಡುತ್ತಿದ್ದರು. ನನ್ನ ಸೊ ಕಾಲ್ಡ್ ಗೆ ಗೆಳತಿ ಮಕ್ಕಳೊಡನೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತಾಡುತ್ತಿದ್ದರು. ಕೆಲಸದ ಜನರು ಸಹಿತ ಹಿಂದಿಯೇ ಮಾತಾಡುತಿದ್ದರು! ನನಗೆ ಅಚ್ಚರಿಯಾಯಿತು. ನನಗೆ ತಿಳಿದ ಹಾಗೆ ಅವರು ಮೂಲತ ಕುಂದಾಪುರದವರೇ . ನಾನು ಮಕ್ಕಳಿಗೆ ಬಹುಶ ಕನ್ನಡ ಬರುವುದಿಲ್ಲ ಎಂದೆಣಿಸಿ ಹಿಂದಿಯಲ್ಲಿ ಮಾತಾಡಿಸಿದೆ. ಆಗ ನನ್ನ ಗೆಳತಿ ಹೇಳಿದರು " ಹೋಯ್ ,ಕನ್ನಡದಲ್ಲೇ ಮಾತಾಡ್ಸಿನಿ ಅಡ್ಡಿಲ್ಲ ಅವರಿಗೆ ಕನ್ನಡ ಬತ್ತ್ . ನಾ ಮತ್ತೆ  ಮಕ್ಕಳ ಇಲ್ಲಿಯವರ ಹಾಂಗೆ ಆಪುದ್ ಬ್ಯಾಡ ಅಂತ ಹಿಂದಿಯಾಗೆ ಮಾತಾಡ್ಸ್ತೆ . " ಅಂದರು!! ನಾನು ಮತ್ತೂ ಆಶ್ಚರ್ಯದಿಂದ ಕೇಳಿದೆ . "ಹಾಗಾದ್ರೆ ಮಕ್ಳು ಫ್ರೆಂಡ್ಸ್ ಜೊತೆ ಏನ್ ಮಾತಾಡ್ತಾರೆ?" ಅವರು ಅಷ್ಟೇ ಕೂಲಾಗಿ ಹೇಳಿದ್ರು . "ನಾನ್ ನನ್  ಮಕ್ಳ್ ನ್ನ  ಯಾರೊಟ್ಟಿಗೂ ಸೇರಸ್ತೆ ಇಲ್ಲೇ. ಹೊರಗೆ ಬಿಡ್ತೆ ಇಲ್ಲೆ. ಮನಿಯಾಗೆ T v ಇತ್ತ . lap top ಇತ್ತ್ . Time pass ಮಾಡ್ತೋ ." ನಾನು ಕನಿಕರದಿಂದ ಟೀವಿ ಯಲ್ಲಿ ಮುಳುಗಿದ್ದ ಚಿಕ್ಕ ಮಕ್ಕಳನ್ನು ನೋಡಿದೆ . ಆ ಮಕ್ಕಳು ಯಂತ್ರದೊ