Posts

Showing posts from January, 2010

ವಿರೋಧಾಭಾಸ

ಸಂಪ್ರದಾಯಸ್ಥ  ಹಿರಿಯರು ಹೇಳಿದರು ನನ್ನ ಜಾತಿಯ ಬಿಟ್ಟು ಹೊರಗಿನವರಲ್ಲಿ  ತೊಟ್ಟು ನೀರು ಕುಡಿಯುವುದು ಅಸಂಭವ! ಜೀವ ಹೋಗುವ ಸಂದರ್ಭದಲ್ಲಿ ಹೇಳಿದರು  ವೈದ್ಯರ ಜಾತಿ ಯಾವುದಾದರೇನು  ವೈದ್ಯೋ ದೇವೋ ಭವ!!!!

ಸಧ್ಯದ ದರದು.

            ಜೀವನದ  ಪ್ರತಿಯೊಂದು ಘಳಿಗೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಾಲದ ಗಣನೆಯಲ್ಲಿ ವರ್ತಮಾನ ಕಾಲವೆಂಬುದೆ ಇಲ್ಲ. ಭೂತ ಮತ್ತು  ಭವಿಷ್ಯದ  ಅತಿ ತೆಳ್ಳನೆಯ ಕೂದಲು ಗಾತ್ರದ ಎಳೆ ಇದು . ಆದರೆ ನಾವು ಯಾವಾಗಲೂ ಭೂತ ಭವಿಷ್ಯ ಗಳ  ಲೋಕದಲ್ಲೇ  ವಿಹರಿಸುತ್ತ  ಇರುತ್ತೇವೆ.ಅತಿ  ಪ್ರಮುಖವಾದ   ವರ್ತಮಾನ  ವನ್ನು ಯೋಚಿಸಲು ಚಿಂತಿಸಲೂ  ನಮಗ ವೇಳೆ ಇಲ್ಲ. ಈ ವರ್ತಮಾನ ವನ್ನು ವಿಸ್ತಾರ ಗೊಳಿಸುವ ಆಲೋಚನಯೇ ನಮಗಿಲ್ಲ. ಆದರೆ ಈ  ಜೀವನದ ವ್ರಮುಖ ಸಂಗತಿ  ಯಲ್ಲೇ ನಮ್ಮ ಸುಖ ಶಾಂತಿ ಅಡಗಿರುತ್ತದೆ .ಇಂದು ಇಂದಿಗೆ ನಿನ್ನೆ ನಿನ್ನೆಗೆ ಇರಲಿ ನಾಳೆಯು ನಾಳೆಗೆ ಎಂಬ ಸೂತ್ರವನ್ನು  ಶೀಘ್ರ ವಾಗಿ ಅಳವಡಿಸಿಕೊಳ್ಳುವ ಅಗತ್ಯತೆ ಈಗ ನಮ್ಮ ಮುಂದಿದೆ.ನನ್ನ ದೃಷ್ಟಿ ಎಲ್ಲಿಯ ವರೆಗೂ ಹಾಯು ತ್ತದೋ ಅಲ್ಲಿಯ ವರೆಗಿನ ನೋಟ ನನ್ನದು ,ದೂರದ ಮಂಜು ಮುಸುಕಿದ ದಿಗಂತ ವಲ್ಲ.ಸಧ್ಯದ ಕಣ್ಣೆದುರಿಗಿನ ಹಿಡಿದ ಕೆಲಸ ಮುಗಿಸುವ ಹೊರೆ ಇದ್ದಾಗ ಅದರ ಮುಂದಿನ ಆಲೋಚನೆ ನಮಗೇಕೆ ,ಅಲ್ಲವೇ?                                                                                                                                              ಎಸ್ .ಗಿರೀಶ ಪುತ್ರಾಯ.

ಎದೆಯೊಳಗಿನ ಹಣತೆ

ಎತ್ತಣೆತ್ತಣವೂ ಸುಡುವ ಬಿಸಿಲ ಬೇಗೆಗೆ ಉರಿಯುತ್ತಿರುವ ನೆತ್ತಿಯ ಎತ್ತಿ ಕಣ್ಣು ಕೀಲಿಸಿದರೂ ತೋರಲಿಲ್ಲವೆಲ್ಲಿಯೂ ತಂಪೆರೆವ ತಂಪಲು. ಬೀಸುತ ಎದುರಾಗುವ ಬಿರುಗಾಳಿಗೆ ಎದೆಯೊಡ್ಡಿ ತೂರಿ ಬರುತ್ತಿರುವ ಧೂಳಿಗೆ ಕಣ್ಣೊಡ್ಡಿ ಕಾಯುತಿದ್ದರೂ ಸೋಕಲಿಲ್ಲವೆಂದೂ ಮುದ ನೀಡುವ ತಂಗಾಳಿ. ಒಮ್ಮೊಮ್ಮೆ ಒಂಟಿಯಾಗಿ ಮತ್ತೊಮ್ಮೆ ಜಂಟಿಯಾಗಿ ಎಡುವುತೇಳುತ ಸಾಗುತಿದ್ದರೂ ಕಾಣಲಿಲ್ಲವೆಂದೂ ತೀರದ ದೂರದ ಕೊನೆ. ಬರಿಗಾಲ ತುಂಬ ಮುಳ್ಳುಗಳು ಕೊರೆದ ಚಿತ್ತಾರ ಏರಿದಷ್ಟೂ ತಲುಪದ  ಗಿರಿಶಿಖರ  ಕರಿಮೋಡದ ಸುತ್ತ ಕಂಡೂ ಕಾಣದ ಬೆಳ್ಳಿಯ ಆವರಣ ಮೈ ಬಣ್ಣ ಮಾಸಿದರೂ, ನಾಲಗೆ ಪಸೆ ಆರಿದರೂ,ತಲೆಗೆದರಿ ಹರಡಿಡರೂ, ಕಣ್ಣುಗಳು ಕೆಂಪೇರಿದರೂ, ಆರಲಿಲ್ಲವೆಂದೂ ಎದೆಯೊಳಗಿನ ಹಣತೆ.