ನಿರ್ಲಿಪ್ತ

ಹಸಿರೆಲೆಯೊಂದು ಸಾಗುತಿದೆ
ಮುಳುಗುತೇಳುತ ನದಿಯಲಿ
ಎತ್ತಣಪಯಣವೆಂಬುದನರಿಯದೆ

ಅಲೆಯೊಡನೆ ಅಲೆಯಾಗಿ
ಶಿಲೆಯೊಡನೆ ಶಿಲೆಯಾಗಿ
ಕಸದೊಡನೆ ಕಸವಾಗಿ
ನೇಸರನೊಡನೆ ರಂಗಾಗಿ

ದಿಕ್ಕು ದೆಸೆಯಿಲ್ಲ ದಾರಿಗೊಂದು
ಗುರಿಯಿಲ್ಲ ಸಾಗುವ ಹಠವಿಲ್ಲ
ನಿಲ್ಲುವ ಆಸೆಯೂ ಇಲ್ಲ ಸವೆದ
ಹಾದಿಯಲಿ ಹೆಜ್ಜೆಯ ಗುರುತೂ ಇಲ್ಲ

ಯಾರು ಬಲ್ಲರು ಯಾವ
ಮರದ ಹೆಮ್ಮೆಯಾಗಿತ್ತೆಂದು
ಯಾರು ಸೆಳೆದು ಬಿಟ್ಟರೆಂದು
ಎಷ್ಟು ದಿನದ ಪಯಣವೆಂದು
ಸಾಗುತಲೇ ಇದೆ ನೀರಿನೊಡನೆ

ತಡೆಯುವರೆಂಬ ಭಯವಿಲ್ಲ
ತಡೆದರೂ ಬೇಸರವಿಲ್ಲ ಬಳುಕುತ
ಈಜುವ ಬಗೆ ಮಾತ್ರ ಗೊತ್ತು
ಅದುವೆ ನಿರ್ಲಿಪ್ತ ಪ್ರಯಾಣಿಕ!

Comments

Post a Comment

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!