Thursday, August 27, 2009

ಬಪ್ಪ್ರ್ಯಲ್ಲಾ ಕುಂದಾಪ್ರಕ್ಕೆ!

(ಧಾರವಾಡದ ಹೋಗ್ರಿ, ಬರ್ರಿ, ಮೈಸೂರು ಸೀಮೆಯ ಹೋಗಿ, ಬನ್ನಿ ಎಂಬುದು ನಾನು ಬಾಲ್ಯದಿನ್ದಲೂ ಕೇಳಿ ಕಲಿತ ಭಾಷೆ. ಆದರೆಕುಂದಾಪುರದ(ಕುಂದಾಪ್ರ!) ಹೋಯ್ಕ,ಬರ್ಕ ಮಾತ್ರ ತೀರಾ ಅಪರಿಚಿತವಾಗಿತ್ತು. ಮೊದಮೊದಲಿಗೆ ಇದು ಕನ್ನಡವೇನಾ ಎಂಬಷ್ಟುಗೊಂದಲ. ಭಾಷೆಗೆ, ಅದರ ವೇಗಕ್ಕೆ ಹೊಂದಿಕೊಂಡು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ (ಮಾತಾಡುವುದಂತೂ ದೂರದಮಾತು!!) ಭರ್ತಿ ಎರಡು ವರ್ಷ ಬೇಕಾಯ್ತು! ನೋಡಿ ಈಗ ಭಾಷೆಯಲ್ಲಿ ಬರೆಯುತ್ತಿದ್ದೇನೆ (ಪ್ರಯತ್ನಿಸುತ್ತಿದ್ದೇನೆ ಎಂಬುದೇ ಸರಿ!!) ಅಂದರೆ ನನಗೆ (ನಾನೆ!!) ಶಹಬ್ಬಾಸ್ ಹೇಳಲೇಬೇಕು!! ನಮ್ಮೂರಿನ ಹಿರಿಯರೊಬ್ಬರು ಬಹಳ ದಿನಗಳ ನಂತರ ಕಂಡಾಗ ನನ್ನನ್ನುಮಾತಿಗೆಳೆದದ್ದು ಹೀಗೆ.)

ಹ್ವಾಯ್ ಹೇಂಗಿದ್ರಿ? ಎಂಥ ಕಾಂಬುಕಿಲ್ಲೆ?...... ಅಮ್ಮನ್ ಮನೀಗ್ ಹೋಯಿರ್ಯಾ?... ಇಲ್ಯಾ? ಮತ್ತೆ ?....ಹೌದಾ.ಮಕ್ಕಳ ಎಂಥಮಾಡ್ತೊ? ಹಿರಿಯಂವ ಶಾಲೆಗ್ ಹೋತ್ನಲ್ದ? ಕಿರ್ದ್? ಎರಡ್ ವರ್ಶ ಆಯ್ತಾ ?..... ಮಸ್ತ್ ಮಾತಾಡ್ತ್ಲ್ ಅಂಬ್ರಲಾ?.... ದೊಡ್ ಮಗಈಗ ಹುಷಾರಾಗಿದ್ನಾ? ಸಣ್ಕಿಪ್ಪತ್ತಿಗೆ ಅಂವಂಗೆ ಹುಷಾರಿರ್ತೇ ಇರ್ಲಿಲ್ಲಲ್ಲಾ. ಈಗ ಅಡ್ಡಿ ಇಲ್ಯಾ?....... ಈಗ ಅದೆಂಥದೊ ಹಂದಿಜ್ವರಅಂಬ್ರಲಾ! ಎಲ್ಲ ಕಡಿಗೂ ಇತ್ತಂಬ್ರಲಾ! ಎಶ್ಟ್ ಜನ ಸತ್ ಹೋಯಿರಂಬ್ರಲಾ ಅಲ್ಲಾ ಎಂಥ ಮಾರ್ರೆ ,........ ಮಕ್ಕಳನ್ ಶಾಲೆಗ್ಕಳ್ಸೂಕು ಹೆದ್ರಿಕಿ ಅಲ್ದಾ?......... ಎಂಥೆಂಥ ಖಾಯಿಲೆ ರೆಡಿಯಾತ್ ಕಾಣಿ........ಅದೆಂಥದೊ ಅಮ್ರುತ ಬಳ್ಳಿ ಕಶಾಯ ಮಾಡಿ ಕುಡುದ್ರೆಬತ್ತಿಲ್ಯಂಬ್ರು. ನಾವ್ ಈಗ್ ನಾಕ್ ದಿವ್ಸದಿಂದ್ ಕುಡೀತಿತ್ತ್. ಅಡಿಗ್ರ ಷಾಪ್ ಹಿಂದೆ ಮಸ್ತ್ ಬೆಳ್ಕಂಡಿತ್ತ್ ಕಾಣಿ. ನಿಮ್ಮನಿ ಬಾನುಗೆಹೇಳೀರೆ ತಂದ್ ಕೊಡ್ತ್ಲ......

ತಮ್ನಿಗೆ
ಮದಿ ಅಂಬ್ರಲಾ!? ಏಗಳೀಕೆ?... ಹುಡ್ಗಿ?.... ಮಂಗ್ಳೂರ್ದಾ? ಆಯ್ಲಿ, ಒಂದ್ ಮದಿ ಗೌಜಿತ್ ಹಾಂಗಾರೆ ! ಈಗಿನ್ ಕಾಲ್ದಾಗೆಗಂಡ್ ಮಕ್ಕಳಿಗೆ ಹೆಣ್ ಸಿಕ್ಕೂದೆ ಕಶ್ಟ್ ಮಾರ್ರೆ........ ಅದ್ರಲ್ಲೂ ಊರ್ ಮನಿ ಮಕ್ಕಳೀಗೆ ಕೇಂಬವ್ರೆ ಇಲ್ಲೆ ! ಹಾಂಗೆ ಆಯ್ಕ, ಹೀಂಗೆಆಯ್ಕ್ ,ಊರ್ ಮನಿ ಬ್ಯಾಡ , ಬೇಸಾಯದ್ ಮನಿ ಬ್ಯಾಡ, ಅತ್ತಿ ಮಾವ ಇರೂಕಾಗ, ಸಿಟೀಲೇ ಇರ್ಕ ಅಂತ್ವಲ್ಲಾ ಹುಡ್ಗ್ಯರು, ಅಲ್ಲಾಪಾಪ ಬುಸಿನೆಸ್ಸನವರು, ಅಡಿಗಿಯವರ, ಪುರೋಹಿತ್ರೆಲ್ಲಾ ಎಂಥ ಮಾಡೋದೇ? ನೇಣ್ ಹಾಯ್ಕೊಂಬುದಾ? ಹೆತ್ತ ಅಪ್ಪ ಅಬ್ಬಿನ್ಬೀದಿಗ್ ಬಿಸಾಡುದಾ? ಎಂಥಾ ಕಾಲ ಬಂತ್ ಮಾರ್ರೆ...........ಒಂದ್ ಸರ್ತಿ ಮದಿ ಆದ್ರು ನೆಮ್ಮದೀಲಿ ಇಪ್ಪಂಗಿಲ್ಲೆ! ಸ್ವಲ್ಪ ಹೆಚ್ ಕಮ್ಮಿಆರೂ ಡೈವೋರ್ಸ್ ಅಂತ್ವಲೆ! ಕಷ್ಟ ಕಷ್ಟ..ಎಷ್ಟೆ ಆರೂ ಕಲಿರಾಯನ್ ಕಾಲ.

ಅತ್ತಿ
ಮಾವ ಹುಷಾರಿದ್ರಾ?....... ವರ್ಷ ಗೆದ್ದಿ ನೆಟ್ಟಿರಾ?..... ಬೇಸಾಯ ಖೈದ್ ಮಾಡ್ತೊ ಅಂತಿದ್ರಲ್ಲಾ?.... ಭತ್ತ ಹಾಕೀರಾ?....... ಕೆಲಸಕ್ಕೆ ಜನದ್ ತೊಂದ್ರಿ ಆಯ್ಲಿಲ್ಯಾ?......... ನಮ್ ಬದಿ ಜನವೇ ಇಲ್ಲ ಮಾರ್ರೆ. ಇದ್ದವೆಲ್ಲಾ ಹಳತಾದೋ, ಹೆಣ್ ಮಕ್ಳ್ ಮದಿ ಆಯ್ಹೋತೋ..ಮದಿ ಆಯ್ ಬಂದವೂ ಕೆಲಸಕ್ ಬತ್ತಿಲ್ಲ. ಎಲ್ಲಿ ಹೋಪುದು ಮಾರ್ರೆ ಜನಕ್ಕೆ? ಇತ್ತೀಚೆಗೆ ಸ್ತ್ರೀ ಶಕ್ತಿ ಅಂತೆಲ್ಲ ಶುರು ಆಯಿ ಬಲಬಂದ್ ಬಿಟ್ಟಿತ್ತ್. ಎಷ್ಟ್ ಸಂಬ್ಳ ಕೊಟ್ರೂ ಸಾಕಾತಿಲ್ಲ. ನಮಿಗೆ ಎಂಥ ಉಳಿತ್ತ್? ಒಟ್ನಲ್ಲಿ ಬೇಸಾಯ ಅಂದ್ರೆ ಬೇಗ್ ಸಾಯಾ!

2 comments:

  1. ಬರುದೆನೋ ಬರ್ದ್ರಿ..ಎಂದಿಗ್ ಮಾತಾಡ್ತ್ರಿ ಕುಂದಾಪ್ರ ಕನ್ನಡ್ದಂಗೆ

    ReplyDelete
  2. ಹ್ವಾಯ್... ಭಾರಿ ಮಸ್ತ್ ಇತ್ತ್ ಕಾಣಿ.. :)

    ReplyDelete