ಅಮ್ಮ

ಯಾವುದೋ ವಾತ್ಸಲ್ಯದ ಮಡಿಲಲ್ಲಿ ಹುಟ್ಟಿ ಬೆಳೆದು
ಎಲ್ಲರನ್ನೂ ತೊರೆದು ಎಲ್ಲೋ ಬಂದು ಸೇರಿದಾಗ
ಅಮ್ಮಾ ನೀ ಅರಿವಾದೆ

ದುಗುಡ ನೋವುಗಳೆಲ್ಲ
ಹೃದಯದೊಳು ಹೆಪ್ಪುಗಟ್ಟಿ ನಿಂತಾಗ
ಮಮತೆಯ ಸ್ವರ ಕಿವಿಯ ತಲುಪಿದೊಡನೆ
ಕರಗಿ ನೀರಾಗಿ ಹರಿವಾಗ
ಅಮ್ಮಾ ನೀ ಅರಿವಾದೆ

ಬರಿದಾದ ಮಡಿಲನ್ನು ಮುದ್ದಾದ
ಪುಟ್ಟ ಜೀವವೊಂದು ತುಂಬಿ
ಪ್ರಪಂಚವೇ ತಾನಾದಾಗ
ಅಮ್ಮಾ ನೀ ಅರಿವಾದೆ

ಕರುಳಕುಡಿ ಮಿಡಿ ಹಲ್ಲು
ತೋರಿಸಿ ನಕ್ಕಾಗ ಜಗತ್ತನ್ನೇ
ಗೆದ್ದ ಸಂಭ್ರಮದಿಂದ ಅದನ್ನು ಬಾಚಿ ತಬ್ಬುವಾಗ
ಅಮ್ಮಾ ನೀ ಅರಿವಾದೆ

ಸಹನೆಯೇ ಮೈವೆತ್ತಂತೆ
ಎಲ್ಲವನ್ನು ನುಂಗಿಕೊಂಡು ಮೌನವಾಗಿ ಹರಿವ
ಕಣ್ಣೀರನ್ನು ಪುಟಾಣಿ ಕೈಯೊಂದು
ಅಕ್ಕರೆಯಿಂದ ಒರೆಸುವಾಗ
ಅಮ್ಮಾ ನೀ ಅರಿವಾದೆ.

Comments

  1. Amazimg!!! very touchy and how true!!!

    ReplyDelete
  2. ಅಮ್ಮನ ಬೆಲೆ ಸರಿಯಾಗಿ ಅರ್ಥವಾಗುವುದು ನಾವು ತಾಯಿಯಾದಾಗಲೆ. ರೋಹಿಣಿಯವರೆ ಕವನ ತುಂಬಾ ಚೆನ್ನಾಗಿದೆ.

    ReplyDelete
  3. ತುಂಬಾ ಸುಂದರವಾಗಿ ಅಮ್ಮನ ಚಿತ್ರಣ ಬಿಡಿಸಿಟ್ಟಿದ್ದೀರಿ..
    ಶಬ್ಧಗಳಲ್ಲಿ... ಭಾವಗಳನ್ನು ಹೇಳುವದು ಕಷ್ಟ...

    ಸುಂದರವಾದ ಕವಿತೆಗೆ ಅಭಿನಂದನೆಗಳು...

    ರಕ್ಷಾ ಬಂಧನದ ಶುಭಾಶಯಗಳು...
    ಪ್ರಕಾಶಣ್ಣ..

    ReplyDelete

Post a Comment

Popular posts from this blog

ಸಂಕ್ರಮಣ

ಹಬ್ಬ ಹಬ್ಬ !!