ನಾನು

ಒಮ್ಮೊಮ್ಮೆ ನನಗೆ ಎಲ್ಲ ಯೋಚನೆಗಳು ಒಟ್ಟಿಗೆ ದಾಳಿ ಮಾಡುತ್ತವೆ. ಆಗ ನಾನು ನಾನಾಗಿರುವುದಿಲ್ಲ. ಎಲ್ಲೆಲ್ಲೊ ವಿಹರಿಸ್ತಾ ಇರ್ತೀನಿ. ಒಮ್ಮೆ ಕಲ್ಪನಾ ಲೋಕಕ್ಕೆ ಬಂದಿಳಿದರೆ ಅಲ್ಲಿಯೇ ಒಂದು ಸಾಮ್ರಾಜ್ಯವನ್ನೇ ಕಟ್ಟಿ ಬಿಡುತ್ತೇನೆ. ಚಿಕ್ಕವಳಿರುವಾಗ ಅಪ್ಪ ಹೇಳುತ್ತಿದ್ದ fantacy ಕಥೆಗಳನ್ನು ಕೇಳಿ ಕೇಳಿ ಕಲ್ಪನಾ ಸಾಮ್ರಾಜ್ಯವನ್ನು ಹೇಗೆ ಆಳುವುದು ಹಾಗು ಹೇಗೆ ವಿಸ್ತರಿಸುವುದು ಎಂಬುದನ್ನೂ ಕಲಿತುಕೊಂಡು ಬಿಟ್ಟಿದ್ದೀನಿ.ಹೀಗೆ ಯೋಚನೆಗಳು ಸಾಗಿ ಸಾಗಿ ಅಲ್ಲಿಯೇ ಒಂದು ಆಶಾಗೋಪುರ ಕಟ್ಟಿ ಅದರ ಮೇಲೇರಿ ಏರಿ ಏರಿ ಸಾಗುತ್ತಿರುವಾಗ ಸತ್ಯವೆಂಬುದು ಧುತ್ತೆಂದು ಕಣ್ಣ ಮುಂದೆ ಪ್ರತ್ಯಕ್ಷವಾಗಿ 'ನನ್ನನ್ನು ಒಪ್ಪಿಕೊ' ಎಂದು ಗೇಲಿ ಮಾಡಿ ನಕ್ಕಾಗ ಎಲ್ಲಿ ನಿಂತಿದ್ದೆನೋ ಅಲ್ಲಿಂದಲೇ ಧೊಪ್ಪೆಂದು ಕೆಳಗೆ ಬಿದ್ದು........ವಾಸ್ತವಕ್ಕೆ ಹೊಂದಿಕೊಳ್ಳಲೇ ಕಷ್ಟವಾಗಿ ಬಿಡತ್ತೆ.

ಒಮ್ಮೊಮ್ಮೆ ಅನಿಸುವುದುಂಟು ನಾನು ಚಿಂತೆ ಎಂಬುದಕ್ಕೆ 'ವಿಚಾರ'ಎಂಬ ದೊಡ್ಡ ಹೆಸರು ಇಟ್ಟುಬಿಟ್ಟಿದ್ದಿನಿ ಅಂತ.ಈ ಭಾವನಜೀವಿಗಳ ಹಣೆಬರಹವೇ ಇಷ್ಟು ಅಂತ ಕಾಣುತ್ತೆ. ಭಾವನೆಗಳೇ ನಮ್ಮನ್ನು ಆಳುತ್ತವೆ. ಎಲ್ಲರ ಜೀವನದಲ್ಲೂ ಏಳು,ಬೀಳು,ಕಷ್ಟ ಸುಖ ಎಲ್ಲವೂ ಇದ್ದರೂ ಅದು ನಮ್ಮ ಸ್ವಂತ ಅನುಭವಕ್ಕೆ ಬಂದಾಗ ಅದು ಹೊಸದೇ.ಆಸೆಗಳಿಗೆ ಮಿತಿ ಇಲ್ಲ, ನಿರಾಶೆಗಳೂ ಕಡಿಮೆ ಇಲ್ಲ.

Comments

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!