ಮಂಥನ

ಅಂತು ಪವನನ ನಿಶ್ಚಿತಾರ್ಥ ಆಯಿತು. ಆದರು ಯಾಕೋ ಸಂತೋಷ ಅಂತ ಆಗ್ತಾ ಇಲ್ಲ. ಹುಡುಗಿ ನೋಡಿಕೊಂಡು ಬಂದ ದಿನವೇ ಪವನ ನನ್ನನ್ನು ಕೇಳಿದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಮನ ಗೊಂದಲದ ಗೂಡಾಗಿತ್ತು. ನನ್ನಿಂದ ಏನು ಉತ್ತರ ಬರದಾಗ ಅಮ್ಮನನ್ನು ಕೇಳಿದ. ಅವರು ಏನೋ ಹೇಳಿದರು, ಕಡೆಗೆ ತನ್ನ ನಿರ್ಧಾರ ಸಾರಿಬಿಟ್ಟ. ತಾನು ಅದೇ ಹುಡುಗಿಯನ್ನ ಮದ್ವೆ ಆಗ್ತೀನಿ ಅಂತ. ಕಡೆಗೆ ಅನ್ನಿಸಿತು ಹೌದು ಅ ಹುಡುಗಿ ಚೆನ್ನಾಗೆ ಇದ್ದಾಳಲ್ಲ,ಬೇಡ ಅನ್ನಲು ಯಾವ ಕಾರಣವೂ ಇರಲ್ಲಿಲ್ಲ. ನಾವೆಲ್ಲ ಸಮ್ಮತಿ ನೀಡಿದೆವು. ಮರುಕ್ಷಣವೇ ನನಗೇಕೋ ಬೇಜರಾಗಲು ಶುರುವಾಯ್ತು. ಪ್ರಸಾದ್ಗೆ ಹೇಳದೆ, 'ನಾನ್ಯಾಕೋ ಪವನನನ್ನು ಮಿಸ್ ಮಾಡಿಕೊಳ್ತಾ ಇದೀನಿ' ಅಂತ. ಅವರಂತೂ ನಕ್ಕುಬಿಟ್ಟರು,'ಯಾರತ್ರನಾದ್ರು ಹೀಗೆ ಹೇಳಿಬಿಟ್ಟೀಯಾ ಮತ್ತೆ, ತಮ್ಮನಿಗೆ ಮದ್ವೆ ಸೆಟ್ಟಾಯ್ತು ಅಂದ್ರೆ ಯಾರಾದ್ರೂ ಬೇಜಾರ್ ಮಡಿಕೊಳ್ತರಾ? ವಿಚಿತ್ರ ಮಾರಾಯ್ತಿ ' ಅಂತ.ನಂತರ ಏನೂ ಮಾತಾಡೋದಿಕ್ಕೆ ಹೋಗಲಿಲ್ಲ. ಅವರತ್ರ ಅಷ್ಟೆ ಅಲ್ಲ ಯಾರತ್ರನು. ನಾನೆಂದೂ ತಮ್ಮನಿಂದ ಏನೂ ನಿರೀಕ್ಷೆ ಮಾಡಲಿಲ್ಲ. ಕಷ್ಟ ,ಸುಖ ಹಂಚ್ಕೊಳ್ತಿದ್ದೆ ಅಷ್ಟೆ. ನನಗ್ಗೊತ್ತು, ಅವನಿಗೂ ಒಬ್ಬಳು ಆತ್ಮೀಯಳು ಬೇಕು, ಜೀವನ ಸಂಗಾತಿ ಬೇಕು ಅಂತ. ಈ ವಿವೇಚನೆ ಮೀರಿ ನಂಗೆ ಈ ತರಹ ಯೋಚಿಸೋದನ್ನ ತಡೆಯೋಕಗ್ತಿಲ್ಲ.
ನಾನು ಬಹುಶ ಒಂಭತ್ತೋ ಅಥವ ಹತ್ತನೇ ಕ್ಲಾಸಲ್ಲಿದ್ದಾಗ ,ಶ್ರಿಧರಣ್ಣ ನನ್ನ ಜಾತಕ ನೋಡಿ ಹೇಳಿದ್ದು ನೆನಪಾಗುತ್ತೆ,"ರೋಹಿಣಿ, ನಿಂಗೆ ಲಗ್ನದಲ್ಲೇ ಚಂದ್ರ,ಚಂದ್ರ ಮನೋಕಾರಕ, ನೀನು ಎಲ್ಲವನ್ನು ಮನಸ್ಸಿಗೆ ಹಚ್ಕೊಳ್ತಿಯ" ಅಂತ ಆಗ "ಇಲ್ಲಪ್ಪ ನಾನು ಆ ತರದವಳೇ ಅಲ್ಲಾ"ಅಂತ ಬೀಗಿದ್ದೆ. ಇಂಥ ಸಂದರ್ಭಗಳಲ್ಲಿ ಆ ಮಾತು ನೆನಪಿಗೆ ಬರದೆ ಇರದು. ಬಹುಶ ಇನ್ನು ಅವನು ಮೊದಲಿನಂತೆ ಆತ್ಮೀಯವಾಗಿ ಇರ್ತನೋ ಇಲ್ಲವೊ ಅಂತ ದಿಗಿಲು ಇರಬಹುದು.ಅತ್ತ ಅಮ್ಮನ ಸ್ಥಿತಿಯು ಏನೂ ಹೊರತಾಗಿಲ್ಲ . ಆದ್ರೆ ನಾನೇನು ಮಾತಾಡೋದಿಕ್ಕೆ ಹೋಗೋಲ್ಲ . ಎನೇ ಆಗಲೀ ಅವನ ಬಾಳು ಚೆನ್ನಾಗಿರಲಿ ಅಂತ ಖಂಡಿತ ಹಾರೈಸ್ತೀನಿ.

Comments

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!